ಕರಾವಳಿ

ಉದ್ಯಮಿ ಭಾಸ್ಕರ್ ಶೆಟ್ಟಿ ಮರ್ಡರ್ ಕೇಸ್: ವಿಶೇಷ ಅಭಿಯೋಜಕರಾಗಿ ಶಾಂತಾರಾಮ ಶೆಟ್ಟಿ ಮುಂದುವರಿಕೆ

Pinterest LinkedIn Tumblr

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ದೂರುದಾರರ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಉಡುಪಿಯ ಖ್ಯಾತ ನ್ಯಾಯವಾದಿ ಶಾಂತಾರಾಮ ಶೆಟ್ಟಿ ಮುಂದುವರಿಯಲಿ ಎಂದು ಸರಕಾರ ಆದೇಶಿಸಿದೆ.

ಮೃತ ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಡ್ತಿ ಅವರ ಕೋರಿಕೆಯಂತೆ ಸರಕಾರವು ಉಡುಪಿಯ ಎಂ. ಶಾಂತಾರಾಮ ಶೆಟ್ಟಿ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ನೇಮಕಕ್ಕೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಶಾಂತಾರಾಮ್‌ ಶೆಟ್ಟಿ ಅವರ ಪರ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿ ಷರತ್ತು ವಿಧಿಸಿ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿ ಸರಕಾರಕ್ಕೆ ಪ್ರಶ್ನಿಸುವಂತೆ ತಿಳಿಸಿತ್ತು.

ವಿಶೇಷ ಅಭಿಯೋಜಕರನ್ನು ಸರಕಾರ ನೇಮಿಸಿರುವ ಕಾರಣ ಆಕ್ಷೇಪಣೆಗಳೇನಿದ್ದರೂ ಸರಕಾರಕ್ಕೆ ಸಲ್ಲಿಸಬಹುದು. ಅದರಂತೆ ಆರೋಪಿ ರಾಜೇಶ್ವರಿ ಶೆಟ್ಟಿ ಪರ ವಕೀಲರು ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆ ತಿರಸ್ಕರಿಸಿದ ಸರಕಾರವು ವಿಶೇಷ ಅಭಿಯೋಜಕರಾಗಿ ಶಾಂತಾರಾಮ ಶೆಟ್ಟಿಯವರೇ ಮುಂದುವರಿಯುವಂತೆ ಆದೇಶ ನೀಡಿದೆ.

Comments are closed.