ಕರಾವಳಿ

ತುಳುನಾಡಿನ ದೈವದ ಕೋಲ ಕಂಡು ರೋಮಾಂಚನಗೊಂಡ ಯದುವೀರ ಒಡೆಯರ್

Pinterest LinkedIn Tumblr

ಉಡುಪಿ: ತುಳುನಾಡಿನಲ್ಲಿ ದೈವಗಳ ಕೋಲ ನೋಡುವುದೇ ಕಣ್ಣಗೆ ಹಬ್ಬ .ಜನರು ಎಷ್ಟೇ ಮುಂದುವರೆದರೂ… ದೈವಗಳ ಆರಾಧನೆಯನ್ನ ಇಲ್ಲಿನ ಜನ ಚಾಚು ತಪ್ಪದೇ ಆಚರಿಸುತ್ತಾರೆ.ಇತ್ತೀಚೆಗೆ ಉಡುಪಿಯ ತಿಂಗಳೆ ಗರಡಿಯ ಶಿವಗಣ ಶಿವರಾಯ ದೈವದ ಕೋಲವನ್ನು ನೋಡಲು ಖುದ್ದು ಮೈಸೂರಿನ ಒಡೆಯರೇ ಅಗಮಿಸಿದ್ದರು.ದೈವಗಳ ಕೋಲವನ್ನು ಕಂಡು ರೋಮಂಚನಗೊಂಡರು .

ಪಶ್ಚಿಮ ಘಟ್ಟದ ತಪ್ಪಲಿನ ದಟ್ಟ ಕಾನನದಲ್ಲಿ ನಿನ್ನೆ ಅರಮನೆಯ ವೈಭವ ಮನೆ ಮಾಡಿತ್ತು . ಉಡುಪಿಯ ಹೆಬ್ರಿ ಸಮೀಪದ ಕಾಡಿನ ಮಧ್ಯೆ ಇರುವ ತಿಂಗಳೆ ಎಂಬಲ್ಲಿನ ಗರಡಿಯಲ್ಲಿ ನಡೆದ ದೈವರಾಧನೆಯನ್ನು ನೋಡಲು ಮೈಸೂರಿನ ಒಡೆಯರೇ ಬಂದಿದ್ದರು . ತಡರಾತ್ರಿಯವರೆಗೂ ದಟ್ಟ ಅರಣ್ಯದಲ್ಲಿ ಕುಳಿತು ದೈವದ ದರ್ಶನ ನೋಡಿದರು. ತಿಂಗಳೆ ಗರಡಿಯಲ್ಲಿ ದಶಕಗಳಿಂದ ದೈವಾರಾಧನೆ ನಡೆಯುತ್ತಿದೆ. ಅದರಲ್ಲೂ ಶಿವಗಣವಾದ ಶಿವರಾಯ ದೈವದ ಆರಾಧನೆ ಇಲ್ಲಿನ ವಿಶೇಷ. ಶಿವರಾಯ ಕೊಟ್ಟ ಅಭಯ ಎಂದೂ ಸುಳ್ಳಾಗಿಲ್ಲ ಅನ್ನೋದು ತುಳುವರ ನಂಬಿಕೆ. ಚಾವಡಿಯ ಆಸನದಲ್ಲಿ ಕುಳಿತು ದೈವ ನರ್ತನ ವೀಕ್ಷಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರೋಮಾಂಛನಗೊಂಡಿದ್ದರು. ದೈವದ ಆವೇಶ, ನರ್ತನ, ಅಭಯದ ಭರವಸೆಯಿಂದ ಖುಷಿಯಾಗಿದ್ದರು. ತಡರಾತ್ರಿ 12 ಗಂಟೆಯವರೆಗೂ ಗರಡಿಯ ಚಾವಡಿಯಲ್ಲಿ ಆಸೀನರಾಗಿ ದೈವದ ಕೋಲ ನೋಡಿದರು.

ತುಳುನಾಡಿನ ದೈವಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಈ ಸನ್ನಿಧಿಯಲ್ಲಿ ಬೇಡಿದ್ದು ಈಡೇರುತ್ತೆ ಅನ್ನೋ ವಿಶ್ವಾಸವಿದೆ. ಗರಡಿಯ ಮುಖ್ಯಸ್ಥ ವಿಕ್ರಮಾರ್ಜುನ ಹೆಗ್ಗಡೆಯವರು ಮೈಸೂರಿಗೆ ಹೋದಾಗ ತನ್ನ ಹಳ್ಳಿಗೆ ಅರಸರನ್ನು ಕರೆಸುವ ಕನಸು ಕಂಡಿದ್ದರು. ಇದಕ್ಕಾಗಿ ದೈವದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ಕೊನೆಗೂ ಒಲಿದ ದೈವ, ಅರಸರನ್ನು ತಿಂಗಳೆ ಗರಡಿಗೆ ಕರೆಸಿಕೊಂಡು ಅಭಯಕೊಟ್ಟಿತು. ದೈವವು ಅರಸರಿಂದ ಕೇಳಿ ಹೂವಿನ ಮಾಲೆ ಹಾಕಿಸಿಕೊಂಡದ್ದು ವಿಶೇಷವಾಗಿತ್ತು. ಶಿವರಾಯ ಕೋಲ ಈ ಭಾಗದಲ್ಲಿ ನಡೆಯುವ ಅಪರೂದ ದೈವ ನರ್ತನವಾಗಿದ್ದು, ಅರಸರ ಈ ಬೇಟಿ ತುಳುನಾಡಿನ ಇತಿಹಾಸದಲ್ಲಿ ದಾಖಲಾಗಲಿದೆ.

ದೈವಗಳಿಗೆ ಶರಣೆಂದ ಅರಸರು, ಗರಡಿಯ ಕೆರೆಯಲ್ಲಿರುವ ದೇವರ ಮೀನಿಗೆ ಆಹಾರ ಉಣ್ಣಿಸಿದರು. ನಗರ ಜೀವನದಿಂದ ಹೊರತಾದ ಪ್ರಾಕೃತಿಕ ಅರಮನೆಯಲ್ಲಿ ವಿಹರಿಸಿದ್ದು ಅರಸರಿಗೂ ಹೊಸ ಅನುಭವ ನೀಡಿತ್ತು.

Comments are closed.