ಕರಾವಳಿ

40 ಅಡಿ ಆಳದಿಂದ ನಾಗರ ಹಾವು ರಕ್ಷಣೆ; ರಕ್ಷಿಸಲು ಮುಂದಾದ ಉರಗ ತಜ್ಞರನ್ನೇ ಕಚ್ಚಲು ಮುಂದಾದ ನಾಗರಾಜ!

Pinterest LinkedIn Tumblr

ಉಡುಪಿ: ಉಡುಪಿಯ ಕುಕ್ಕೆ ಹಳ್ಳಿ ಎಂಬಲ್ಲಿ ಸುಮಾರು 5 ಮುಕ್ಕಾಲು ಅಡಿ ಉದ್ದದ ವಿಷಕಾರಿ ನಾಗರ ಹಾವೊಂದು ಅವರಣವಿಲ್ಲದ ಬಾವಿಯೊಳಗೆ ಒಂದು ತಿಂಗಳ ಹಿಂದೆ ಬಿದ್ದಿತ್ತು. ಬಂಡೆ ಒಡೆದು ತೋಡಲಾಗಿದ್ದ ಬಾವಿಯಲ್ಲಿ ಹಾವಿಗೆ ಮೇಲೆ ಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದನ್ನ ಕಂಡ ಸ್ಥಳೀಯರು ,ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿದ್ದಾರೆ. ಉರಗ ತಜ್ಞರ ಸಲಹೆಯಂತೆ ಸ್ಥಳಿಯರು ಬುಟ್ಟಿಯನ್ನ ಬಾವಿಗೆ ಇಳಿಸಿ ಹಾವನ್ನ ಬಾವಿಯಿಂದ ಮೇಲತ್ತಲು ಬಹಳ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ .

ಕೊನೆಗೆ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಸ್ಥಳಕ್ಕೆ ತೆರಳಿ ಹಾವನ್ನ ಮೇಲೆತ್ತಲು ಪ್ರಯತ್ನಿಸಿದ್ದಾರೆ.ಬುಟ್ಟಿಯನ್ನ ಹಗ್ಗ ಕ್ಕೆ ಕಟ್ಟಿ ಬಾವಿಗಿಳಿಸಿದರೆ , ಹಾವು ಮಾತ್ರ ಬುಟ್ಟಿಗೆ ಬರುತ್ತಿರಲಿಲ್ಲ. ಎಷ್ಟೇ …ಪ್ರಯತ್ನ ಪಟ್ರು ಹಾವು ಮೇಲಕ್ಕೆ ಬಾರದಿದ್ದರಿಂದ ಕೊನೆಗೆ ಉರಗ ತಜ್ನರೇ ಖುದ್ದು ಹಗ್ಗದ ಮೂಲಕ ಹಾವನ್ನ ಮೇಳಕ್ಕೆತ್ತಲು ಬಾವಿಗಿಳಿದಿದ್ದಾರೆ.

ಉರಗ ತಜ್ನ ಬಾವಿಗಿಳಿಯುತ್ತಿದ್ದಂತೆ ಬುಸುಗುಟ್ಟುತ್ತಾ ಹಾವು ಕಚ್ಚಲು ಬರುತ್ತಿತ್ತು . ಬಾವಿಯಲ್ಲಿ ನೀರಿದ್ದ ಕಾರಣ ಬಾವಿಯಲ್ಲಿ ನಿಲ್ಲಲ್ಲೂ ಕೂಡ ಸ್ಥಳವಾಕಾಶ ಇಲ್ಲದೇ ಹಗ್ಗದಲ್ಲಿಯೇ ನೇತಾಡಿಕೊಂಡು ಹಾವನ್ನ ಹಿಡಿಯಲು ಪ್ರಯತ್ನಿಸಿದ್ದಾರೆ.ಸತತ ಮೂರು ಗಂಟೆಗಳ ಹರಸಹಾಸ ಪಟ್ಟು ನಾಗರ ಹಾವನ್ನ ಕೊನೆಗೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೈ ಯಲ್ಲಿ ಹಿಡಿಯುವಾಗಲು ಹಾವು ಕಚ್ಚಲು ಪ್ರಯತ್ನಸಿಸುತ್ತಿದ್ದದ್ದು ಸ್ಥಳಿಯರ ಅತಂಕಕ್ಕೂ ಕಾರಣವಾಯ್ತು.ಕೊನೆಗೆ ಸ್ಥಳೀಯರ ಸಹಾಯದಿಂದ ಹಾವನ್ನ ಬಾವಿಯಿಂದ ಮೇಲಕ್ಕೇತ್ತಲಾಯ್ತು.

ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಹಾವುಗಳ ಮಿಲನ ಕಾಲ,ಹೀಗಾಗಿ ಸಂಗಾತಿಯನ್ನ ಹುಡುಕಿಕೊಂಡು ಬಂದ ಹಾವು ಬಾವಿಗೆ ಬಿದ್ದಿದ್ದೆ ಅನ್ನೋದು ಉರಗ ತಜ್ನರ ಅಭಿಪ್ರಾಯ.ಅಷ್ಟೇ ಅಲ್ಲದೇ ಬಾವಿಯಲ್ಲಿರೋ ಹಾವುಗಳು ತುಂಬಾ ಅಪಾಯಕಾರಿ ಅವುಗಳು ಕಚ್ಚಿದರೆ ಶೇಖಡ 80 ರಷ್ಟು ವಿಷ ದೇಹವನ್ನು ನೇರ ಪ್ರವೇಶ ಮಾಡುತ್ತೆ.ಬದುಕಿಸಲು ಕೆಳಗಿದವನು ಬಾವಿಯಿಂದ ಮೇಲಕ್ಕೆ ಬರುವಷ್ಟರಲ್ಲಿ ವಿಷ ಇಡೀ ದೇಹಕ್ಕೇರಿ ವ್ಯಕ್ತಿ ಸಾವಾನ್ನಾಪ್ಪುತ್ತಾನೆ .ಹೀಗಾಗಿ ಸಾಕಾಷ್ಟು ಎಚ್ಚರಿಕೆಯಿಂದ ಹಾವನ್ನ ಹಿಡಿಯಲು ಮುಂದಾಗಿದ್ದೇನೆಂದು ಗುರು ಸನಿಲ್ ಹೇಳಿದರು.

ತನ್ನ ಪ್ರಾಣದ ಕಾಳಜಿ ಯಿಂದ ಬಾವಿಗೆ ಇಳಿಯದಿದ್ದಲ್ಲಿ, ಹಾವು ಬಾವಿಯಲ್ಲಿ ಯೇ ಸಾಯಬೇಕಾಗಿತ್ತು.ಎನೇ ಅಗಲಿ ಕಲಿತ ವಿದ್ಯೆಯನ್ನು ಉಪಯೋಗಿಸಿ ಹಾವಿನ ರಕ್ಷಣೆ ಮಾಡಬೇಕೆಂಬ ದೃಡ ನಿರ್ಧಾರದಿಂದ ಬಾವಿಗಿಳಿದು ರಕ್ಷಣೆ ಮಾಡಿದ್ದಾರೆ. ಹಲವು ದಿನಗಳಿಂದ ಆಹಾರವಿಲ್ಲದೇ, ಬಾವಿಯ ಉಷ್ಣಾಂಶ ದಿಂದ ಹಾವು ಅರೆ ಜೀವವಸ್ಥೆಗೆ ಬಂದಿತ್ತು.ಹಾವಿಗೆ ಸೂಕ್ತವಾದ ಚಿಕಿತ್ಸೆಯನ್ನ ನೀಡಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ತನ್ನ ಪ್ರಾಣದ ಹಂಗು ತೊರೆದು ಹಾವಿನ ಪ್ರಾಣ ಕಾಪಾಡಿದ ಉರಗ ತಜ್ಞ ಗುರುರಾಜ್ ಸನಿಲ್ ಕಾರ್ಯ ಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Comments are closed.