ಕರಾವಳಿ

‘ಹಾಸ್ಟೆಲ್ ಹಗರಣ’: ಬಿಜೆಪಿ ಮಾಡಿದ ಸಮೀಕ್ಷೆಯ ವರದಿಯಲ್ಲಿದೆ ಬೆಚ್ಚಿಬೀಳಿಸುವ ಆರೋಪ!

Pinterest LinkedIn Tumblr

ಉಡುಪಿ: ರಾಜ್ಯದ ಸರ್ಕಾರಿ ಹಾಸ್ಟೆಲ್ ಗಳ ಬಗ್ಗೆ ಬಿಜೆಪಿ ಸಮೀಕ್ಷೆ ನಡೆಸಿದ ಪುಸ್ತಕವನ್ನು ಉಡುಪಿ ಜಿಲ್ಲಾ ಬಿಜೆಪಿ ಮುಖಂಡರು ಬಿಡುಗಡೆಗೊಳಿಸಿದರು.ರಾಜ್ಯದಲ್ಲಿರುವ ಹಿಂದುಳಿದ ವಿದ್ಯಾರ್ಥಿಗಳ ಹಾಗೂ ಮಹಿಳಾ ಹಾಸ್ಟೆಲ್ ಗಳು ನರಕ ಕೂಪಗಳಾಗಿವೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಾಸ್ಡಲ್ ಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ . ಹೀಗಾಗಿ ಬಿಜೆಪಿ ಇಡೀ ರಾಜ್ಯದಲ್ಲಿರುವ ಹಾಸ್ಟೆಲ್ ಗಳ ಬಗ್ಗೆ ಸಮಗ್ರ ಸಮೀಕ್ಷೆಯನ್ನ ಮಾಡಿದೆ.ಇದರ ಪ್ರಕರ ಸುಮಾರು 2,157.77 ಕೋಟಿ ರೂಪಾಯಿಗಳ ಹಾಸ್ಟೆಲ್ ಹಗರಣ ನಡೆದಿದ್ದು .ಇದನ್ನ ಪುಸ್ತಕ ರೂಪದಲ್ಲಿ ಬಿಜೆಪಿ ಬಿಡುಗಡೆಗೊಳಿಸಿದೆ.

ರಾಜ್ಯದ ಒಟ್ಟು 1080 ಎಸ್ ಎಸ್ಟಿ ಹಾಸ್ಟೆಲ್ ,1510 ಒಬಿಸಿ ಹಾಸ್ಟೆಲ್ ಗಳನ್ನ ಖುದ್ದಾಗಿ ಸಂದರ್ಶಿಸಿ ಪರಿಶೀಲನೆ ಮಾಡಿ ಸಮಗ್ರ ವರಿದಿಯನ್ನ ತಯಾರಿಸಲಾಗಿದೆ. ಸುಮಾರು 377 ಹಾಸ್ಡೆಲ್ ಗಳಲ್ಲಿ ಹಾಸ್ಟೆಲ್ ವಾರ್ಡನ್ ಗಳಿಲ್ಲ ,381 ಹಸ್ಟೇಲ್ ಗಳಲ್ಲಿ ಶೌಚಲಯ ಹಾಗೂ ಸ್ನಾಗೃಹಗಳೇ ಇಲ್ಲ ,ಇನ್ನೂ ಶೇಕಡ 80 ರಚ್ಟು ಹಾಸ್ಟೆಲ್ ಗಳು ವಾಸಕ್ಕೆ ಆಯೋಗ್ಯವಾಗಿದೆ ಎಂದು ಬಿಜೆಪಿಯ ಸಮೀಕ್ಷಾ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಿಗೆ ಯಾವುದೇ ಸುರಕ್ಷತೆಯೇ ಇಲ್ಲ .ಯಾವುದೇ ಸೌಲಭ್ಯಗಳನ್ನ ನೀಡದೆ ಹಿಂದುಳಿದ ವರ್ಗಗಳ ಹೆಸರಲ್ಲಿ ಸರ್ಕಾರ ಕೋಟಿ ಕೋಟಿ ಲೂಟಿ ಹೊಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

Comments are closed.