ಕರಾವಳಿ

ಸಂಸದೆ ಶೋಭಾ ಕರಂದ್ಲಾಜೆ ಬಳಿಯಿದೆಯಂತೆ ಅಮೆರಿಕನ್ ಪಿಸ್ತೂಲ್!?

Pinterest LinkedIn Tumblr

ಉಡುಪಿ : ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಧಾನಿಯ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಬದಿಗಿಟ್ಟು ತಮ್ಮ ಆತ್ಮರಕ್ಷಣೆಗಾಗಿ ಅಮೆರಿಕನ್ ಪಿಸ್ತೂಲ್ ಖರೀದಿಸಿದ್ದಾರೆ.

ಬಂಟ್ವಾಳದಲ್ಲಿ ಶರತ್ ಮಡಿವಾಳ ಹತ್ಯೆ ಪ್ರಕರಣದ ನಂತರ ತಮಗೆ ಬರುತ್ತಿರುವ ಹಲವು ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಕೆಲವರ ಸಲಹೆಯಂತೆ ಪಿಸ್ತೂಲ್ ಪರವಾನಗಿಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದ ಶೋಭಾಗೆ ಪರವಾನಗಿ ದೊರಕಿದ್ದೇ ತಡ ಅವರು ಸಕಲೇಶಪುರದಲ್ಲಿ ಈ ಅಮೆರಿಕನ್ ಪಿಸ್ತೂಲು ಖರೀದಿಸಿದ್ದಾರೆ ಎನ್ನಲಾಗಿದೆ. ದೇಶೀಯ ನಿರ್ಮಿತ ಪಿಸ್ತೂಲು ಖರೀದಿಸುವುದನ್ನು ಬಿಟ್ಟು ಅವರೇಕೆ ವಿದೇಶಿ ನಿರ್ಮಿತ ಪಿಸ್ತೂಲು ಖರೀದಿಸಿದ್ದಾರೆಂಬ ಪ್ರಶ್ನೆಯಲ್ಲಿ ಸ್ವದೇಶಿ ಪ್ರತಿಪಾದಕರಾಗಿರುವ ಅವರ ಸ್ವಪಕ್ಷೀಯರೇ ಪ್ರಶ್ನಿಸುತ್ತಿದ್ದಾರೆಂಬ ಸುದ್ದಿಯಿದೆ. ಏನೇ ಆಗಲಿ, ಪಿಸ್ತೂಲು ಹೊಂದಿದ ನಂತರ ಶೋಭಾ ಮನಸ್ಸಿನಲ್ಲಿನ ಭಯ ಸ್ವಲ್ಪ ಮಟ್ಟಿಗೆ ದೂರವಾಗಿದೆಯಂತೆ.

ಶೋಭಾಗೆ ಇಂಟರ್ನೆಟ್ ಮೂಲಕ ಬೆದರಿಕೆ ಕರೆ ಬರುತ್ತಿವೆಯೆನ್ನಲಾಗಿದ್ದು ಅವುಗಳ ಜಾಡು ಹಿಡಿಯುವುದು ಪೊಲೀಸರಿಗೆ ಕಷ್ಟವಾಗಿದೆ ಎನ್ನಲಾಗಿದೆ.

Comments are closed.