ಕರಾವಳಿ

ಸಂಘಟನೆಗಳ ನಿಷೇಧದಿಂದ ಪ್ರಯೋಜನವಿಲ್ಲ – ಗಲಭೆ, ಹತ್ಯೆಗಳನ್ನು ತಡೆಯಲು ಸಂಘಟನೆಗಳ ವಿರುದ್ಧ ಕ್ರಮ : ಗೃಹ ಸಚಿವ ರಾಮಲಿಂಗಾ ರೆಡ್ಡಿ

Pinterest LinkedIn Tumblr

ಗೋ ಹತ್ಯೆ ನಿಷೇಧದ ಜೊತೆ ಎಲ್ಲಾ ಪ್ರಾಣಿಗಳ ಹತ್ಯೆ ನಿಷೇಧಿಸಲಿ : ಗೃಹ ಸಚಿವ ರಾಮಲಿಂಗಾ ರೆಡ್ಡಿ

ಮಂಗಳೂರು, ಮಾರ್ಚ್.6: ಬಿಜೆಪಿಯವರು ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುತ್ತಾರೆ. ಆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ ದೇಶದಿಂದ ಗೋಮಾಂಸ ರಫ್ತಾಗುತ್ತಿದೆ. ಬಿಜೆಪಿಯವರು ಮೊದಲು ಅದನ್ನು ನಿಲ್ಲಿಸಲು ಹೇಳಲಿ. ಆಗ ಗೋ ಹತ್ಯೆ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷೇಧಿಸುವುದಾದರೆ ಎಲ್ಲಾ ಪ್ರಾಣಿಗಳ ಹತ್ಯೆಯನ್ನೂ ನಿಷೇಧಿಸಲಿ. 14 ಲಕ್ಷ ಜೀವರಾಶಿಗಳಿಗೂ ಜೀವಿಸುವ ಹಕ್ಕಿದೆ. ಯಾರ ಬದುಕನ್ನೂ ಕಿತ್ತುಕೊಳ್ಳುವ ಅವಕಾಶ ಯಾರಿಗೂ ಇಲ್ಲ ಎಂದು ಹೇಳಿದರು.

ಸಂಘಟನೆಗಳಿಂದ ಅಹಿತಕರ ಘಟನೆಗಳು ಆಗದಂತೆ ಕ್ರಮ :

ನಗರದಲ್ಲಿರುವ ಭಯೋತ್ಪಾದಕ ಸಂಘಟನೆಗಳಿಂದ ನಡೆಯುತ್ತಿರುವ ಗಲಭೆ, ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದರು.

ಈ ವೇಳೆ ಸಂಘಟನೆಗಳನ್ನು ನಿಷೇಧ ಮಾಡಲಾಗುತ್ತದೆಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಇರುವ ಸಂಘಟನೆಗಳನ್ನು ನಿಷೇಧ ಮಾಡಿದರೆ ಮತ್ತೊಂದು ಹೆಸರಿನಲ್ಲಿ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಅದರ ಬದಲಿಗೆ ಸಂಘಟನೆಗಳಿಂದ ಅಹಿತಕರ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಅದನ್ನು ಮಾಡಲಾಗುತ್ತಿದೆ. ಜನರಿಗೆ ಶಾಂತಿ ಮುಖ್ಯವೇ ಹೊರತು ಗಲಭೆಗಳಲ್ಲ. ಯಾವುದೇ ಒಂದು ವಿಷಯ ವಿಪರೀತಕ್ಕೆ ಹೋದನ್ನು ಅದನ್ನು ತಡೆಯುವುದು ಅಗತ್ಯವಾಗಿರುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ. ಸುಧೀರ್, ಮನಪಾ ಸದಸ್ಯ ಭಾಸ್ಕರ ಮೊಯ್ಲಿ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.

Comments are closed.