ಉಡುಪಿ: ಪಾಂಗಾಳ ಸೇತುವೆ ಬಳಿ ಬಸ್ಸು, ಕಾರು ಹಾಗು ಲಾರಿ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಹಲವು ಮಂದಿ ಗಾಯ ಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಂಗಳೂರು ಕಡೆಯಿಂದ ಬಂದ ಕಾರು, ನವ ಯುಗ ಕಂಪೆನಿಯ ರೆಡಿ ಮಿಕ್ಸ್ ಲಾರಿ ಪಾಂಗಾಳ ಸೇತುವೆ ಬಳಿಯ ಡಿವೈಡರ್ ನಲ್ಲಿ ಯೂಟರ್ನ್ ಮಾಡುತ್ತಿದ್ದಂತೆ ಉಡುಪಿಯತ್ತ ಚಲಿಸುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಅಪಘಾತದಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.