ಕರಾವಳಿ

ಸಾಮಾಜಿಕ ನ್ಯಾಯಕ್ಕೆ ಭದ್ರತೆ ನೀಡಿದ್ದು ದೈವಾರಾಧನೆ : ಸಂಸದ ನಳಿನ್ ಕುಮಾರ್ ಕಟೀಲು

Pinterest LinkedIn Tumblr

ಮಂಗಳೂರು : ತುಳುನಾಡಿನ ಸಂಸ್ಕೃತಿಯ ಮೂಲ ಕೇಂದ್ರ ದೈವಾರಾಧನೆ. ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟವಾಗಿ ತುಳುನಾಡಿನಲ್ಲಿ ದೈವಾರಾಧನೆ ಪರಂಪರೆ ಉಳಿದು ಕೊಂಡು ಬಂದಿದೆ . ದೈವಾರಾಧನೆ ಹಿಂದೂಗಳ ಪೂಜಾ ಮಂದಿರದಲ್ಲಿ ಪ್ರಮುಖವಾದ ಸ್ಥಾನಮಾನ ಪಡೆದು ಕೊಂಡಿದೆ. ದೈವಸ್ಥಾನಗಳಲ್ಲಿ ಪಾವಿತ್ರ್ಯತೆ ಮತ್ತು ಧನಾತ್ಮಕ ಅಂಶಗಳನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ .ದೈವಾರಾಧನೆ
ಸಾಮಾಜಿಕ ನ್ಯಾಯಕ್ಕೆ ಭದ್ರತೆ ನೀಡಿದೆ ಎಂದು ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಹೇಳಿದ್ದಾರೆ.

ಅವರು ನಗರದ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಬಳಿ ಸಂಸದ ನಿಧಿಯಿಂದ ರೂಪಾಯಿ ಐದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮೇಲ್ಛಾವಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನ ಭವ್ಯವಾದ ರೀತಿಯಲ್ಲಿ ನಿರ್ಮಾಣವಾಗಿದೆ. ಪರಿಸರದ ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿ ಶ್ರೀ ಕ್ಷೇತ್ರ ಬೆಳಗುತ್ತಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಹಾಯ ಸಹಕಾರ ಸದಾ ಇದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ದೈವಸ್ಥಾನದ ಗುರಿಕಾರರಾದ ಶ್ರೀ ಎಸ್. ರಾಘವೇಂದ್ರ ಅವರು ಸನ್ಮಾನಿಸಿದರು .

ಸ್ಥಳೀಯ ಕಾರ್ಪೋರೇಟರ್ ಕು.ಅಪ್ಪಿ, ಬಿಜೆಪಿ ಮಂಗಳೂರು ನಗರ ಅಧ್ಯಕ್ಷರಾದ ವೇದವ್ಯಾಸ ಕಾಮತ್ , ದೈವಸ್ಥಾನದ ಗೌರವ ಸಲಹೆಗಾರರಾದ ಶ್ರೀ ಕೆ.ಪಾಂಡುರಂಗ , ಎಸ್.ಬಾಬು , ಆರ್ಚಕರಾದ ಶ್ರೀ ಗಣೇಶ್ ಎಸ್. ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್ ,.ಕೋಶಾಧಿಕಾರಿ ಶ್ರೀ ಎಸ್. ನವೀನ್ , ಜಾನಪದ ವಿದ್ವಾಂಸರಾದ ಶ್ರೀ ಕೆ.ಕೆ.ಪೇಜಾವರ್ , ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ರೀ ಪ್ರಭಾಕರ್ ಹಾಗೂ ದೈವಸ್ಥಾನದ ಪದಾಧಿಕಾರಿಗಳು ಭಾಗವಹಿಸಿದ್ದರು

Comments are closed.