ರಾಷ್ಟ್ರೀಯ

ದಕ್ಷಿಣದ ರಾಜ್ಯವೊಂದರ ರಾಜ್ಯಪಾಲರ ಮೇಲೆ ಲೈಂಗಿಕ ಕಿರುಕುಳದ ಆರೋಪ

Pinterest LinkedIn Tumblr


ದೆಹಲಿ: ದಕ್ಷಿಣದ ರಾಜ್ಯವೊಂದರ ರಾಜ್ಯಪಾಲರು ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಲಾಗಿದ್ದು ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ.

ರಾಜಭವನದ ಮಹಿಳಾ ಸಿಬ್ಬಂದಿಯೊಬ್ಬರಿಗೆ ತಮ್ಮ ಕೆಲಸವಾಗಬೇಕಿದ್ದಲ್ಲಿ ತಮ್ಮೊಂದಿಗೆ ಲೈಂಗಿಕವಾಗಿ ಸಹಕರಿಸಲು ಆಪಾದಿತ ರಾಜ್ಯಪಾಲರು ಕೇಳಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಂಬಂಧಿತ ರಾಜ್ಯಪಾಲರ ಗುರುತಿನ ಕುರಿತಂತೆ ಗೃಹ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೂರನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಪದ ಕುರಿತಂತೆ ಕೂಲಂಕುಷ ಪರಿಶೀಲನೆ ನಡೆಸಲು ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಿದೆ. ಆರೋಪದಲ್ಲಿ ಸತ್ಯಾಸತ್ಯತೆ ಕಂಡುಬಂದಲ್ಲಿ ಕೂಡಲೇ ರಾಜ್ಯಪಾಲ ಹುದ್ದೆಗೆ ರಾಜಿನಾಮೆ ನೀಡಲು ಸೂಚಿಸಲಾಗುವುದು.

ಕಳೆದ ವರ್ಷ ಜನವರಿಯಲ್ಲಿ ಮೇಘಾಲಯ ರಾಜ್ಯಪಾಲ ವಿ ಶಣ್ಮುಗನಾಥನ್‌ ಇಂಥದ್ದೇ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಲಾಗಿತ್ತು. ರಾಜಭವನದ ನೂರಕ್ಕೂ ಹೆಚ್ಚು ಮಂದಿ ಶಣ್ಮುಖನಾಥನ್‌ ರಾಜೀನಾಮೆ ಕೋರಿ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಗೆ ಪತ್ರ ಬರೆದಿದ್ದರು.

ರಾಜಕೀಯವಾಗಿ ಪ್ರಕ್ಷುಬ್ಧವಾದ ರಾಜ್ಯವಾದ ಕಾರಣ ಕಳಕಳೀ ವ್ಯಕ್ತಪಡಿಸಿರುವ ಕೇಂದ್ರ ಸರಕಾರ ಸಂಬಂಧಿಸಿದ ವ್ಯಕ್ತಿಗೆ ಸಮನ್ಸ್ ನೀಡಿಲ್ಲ ಎಂದು ತಿಳಿದುಬಂದಿದೆ.

Comments are closed.