ಕರಾವಳಿ

ನಾಳೆ (ಫೆಬ್ರವರಿ.25) ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಈ ಶತಮಾನದ ಕಂಡರಿಯದ ವಿಶೇಷ ಬ್ರಹ್ಮಕಲಶಾಭಿಷೇಕ

Pinterest LinkedIn Tumblr

ಮಂಗಳೂರು, ಫೆಬ್ರವರಿ.24: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಸಮಗ್ರವಾಗಿ 9 ಕೋಟಿ ರೂಪಾಯಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡಿದ್ದು, ನಾಳೆ ಈ ಶತಮಾನದಲ್ಲಿ ಕಂಡರಿಯದ ವಿಶೇಷವಾದ ಬ್ರಹ್ಮಕಲಶಾಭಿಷೇಕವು ಶ್ರೀ ಅನಂತಪದ್ಮನಾಭ ದೇವರಿಗೆ ಪೂರ್ವಾಹ್ನ 6.45ರಿಂದ 7.45ರ ಸಮಯ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ ಜರಗಲಿದೆ.

ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದ ಬ್ರಹ್ಮಕಲಶಾಭಿಷೇಕ ಜರಗಲಿರುವುದು.

ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಂತರ ಪ್ರಸನ್ನಪೂಜೆ, ಅವಸ್ರುತೋಕ್ಷಾಬಲಿ, ಪ್ರಸಾದವಿತರಣೆ, ಮಹಾಮಂತ್ರಾಕ್ಷತೆ ಜರಗಲಿದೆ. ಪೂರ್ವಾಹ್ನ೧೦.೩೦ಕ್ಕೆ ಸರ್ವಾಭರಣ ಭೂಷಿತ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಧ್ಯಾಹ್ನದ ವಿಶೇಷ ಪೂಜೆ ನಿತ್ಯಬಲಿಯಾಗಿ ಅನ್ನಛತ್ರದಲ್ಲಿ ಪಲ್ಲಪೂಜೆ ಜರಗಲಿರುವುದು. ತದನಂತರ ಶ್ರೀ ದೇವರ ಪ್ರಸಾದ ರೂಪದ ಮಹಾ‌ಅನ್ನಸಂತರ್ಪಣೆ ಜರಗಲಿರುವುದು. ರಾತ್ರಿ ಮಹಾಪೂಜೆಯಾಗಿ ಶ್ರೀ ದೇವರ ಉತ್ಸವ ಬಲಿ ಜರಗಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಚೆನ್ನೈನ ಉದಯಾಲೂರ್ ಕಲ್ಯಾಣದಾಮ ಭಾಗವತರ ಮತ್ತು ಬಳಗದವರಿಂದ ಸಂಪ್ರದಾಯಿಕ ಭಜನಾ ನಾಮ ಸಂಕೀರ್ತನೆ, ಶ್ರೀ ರಘುಬಾಯಾರು ಬಳಗದವರಿಂದ ಅತಿಥಿಯಾಗಿ ಭೋಜರಾಜ ವಾಮಂಜೂರು ಸಂಗೀತ ರಸಮಂಜರಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈವಿದ್ಯ ಜರಗಲಿರುವುದು.

ಧಾರ್ಮಿಕ ಸಭೆಯಲ್ಲಿ ಡಾ. ಸದಾನಂದ ಪೆರ್ಲರವರಿಂದ ತುಳುನಾಡ ಸಂಸ್ಕೃತಿ ವಿಷಯವಾದ ಉಪನ್ಯಾಸ ಪರಮಪೂಜ್ಯ ಸುಬ್ರಹ್ಮಣ್ಯ ಮಠಾಧೀಶರ ಆಶೀರ್ವಚನ, ವಿಶೇಷ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪರಿಸರ ಜೀವಿಶಾಸ್ತ್ರ ಹಾಗೂ ಅರಣ್ಯ ಸಚಿವರಾದ ಬಿ.ರಮಾನಾಥ ರೈ, ಸಂಸದರು ಹಾಗೂ ಆರ್ಥಿಕ ಸ್ಥಾಯಿಸಮಿತಿಯ ಅಧ್ಯಕ್ಷರಾದ ಎಂ.ವೀರಪ್ಪಮೊಲಿ, ಸಂಸದರು ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಶಾಸಕಿ ಶಕುಂತಳಾ ಶೆಟ್ಟಿ, ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿರುವರು.

ಸಕಲ ಸಿದ್ಧತೆ :

ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಎಲ್ಲಾ ಸದಸ್ಯರ ಹಾಗೂ ಎಲ್ಲಾ ಉಪಸಮಿತಿಯ ಸದಸ್ಯರು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ದೇವರ ದರ್ಶನ, ಶ್ರೀ ದೇವರ ಅನ್ನಪ್ರಸಾದ ಹಾಗೂ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಸಕಲ ವ್ಯವಸ್ಥೆ ಮಾಡಿರುವರು. ಎಲ್ಲಾ ಭಕ್ತರು ಶಾಂತವಾಗಿ ದೇವರ ದರ್ಶನ ಮಾಡಿ ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

Comments are closed.