ಉಡುಪಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಒಂದಲ್ಲ ಒಂದು ಅವಾಂತರಗಳಿಂದ ಸುದ್ದಿಯಾಗ್ತಾನೆ ಇದೆ.ಇದೀಗ ಉಡುಪಿಯಲ್ಲಿ ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾಧ್ಯಕ್ಷ ಫೇಸ್ ಬುಕ್ ಪೇಜ್ ನಲ್ಲಿ ಮಾಧ್ಯಮ ಮಂದಿಯ ಮೇಲೆ ಕಂಮೆಂಟ್ ಮಾಡಿ ಮಾಧ್ಯಮ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉಡುಪಿ ಕಾಂಗ್ರೆಸ್ ನ ಐಟಿ ಸೆಲ್ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಎನ್ನುವ ವ್ಯಕ್ತಿ ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿದ್ದು, ಮಾಧ್ಯಮಗಳು ಅಮಿತ್ ಷಾ ಕಾರ್ಯಕ್ರಮಕ್ಕೆ ದೊಡ್ಡ ಪ್ರಚಾರ ಕೊಡ್ತಾರೆ, ಅದ್ರೆ ಸಿಎಂ ಕಾರ್ಯಕ್ರಮಗಳನ್ನ ಚಿಕ್ಕದಾಗಿ ಮಾಡ್ತೀರಾ ಅಂತಾ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳು ಬಿಜೆಪಿ ಬಕೆಟ್ ಮಾಧ್ಯಮಗಳು ಎಂದು ಟೀಕಿಸಿದ್ದಾರೆ.
ಈ ರೀತಿ ಮಾಧ್ಯಮ ಮಂದಿಯನ್ನ ಬಕೆಟ್ ಮಾಧ್ಯಮ ಎಂದು ಸಂಭೋಧಿಸಿರುವುದಕ್ಕೆ,ಅಕ್ರೋಷಗೊಂಡ ಮಾಧ್ಯಮ ಮಂದಿ ಕಾಂಗ್ರೆಸ್ ಕಚೇರಿಗೆ ತೆರಳಿ ವಿಶ್ವಾಸ್ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಕ್ಷಮೆ ಕೇಳುವಂತೆ ಅಗ್ರಹಿಸಿದರು.
ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತ ಉದ್ಯಾವರ ನಾಗೇಶ್ ಎನ್ನುವವರು ಅಮಿತ್ ಷಾ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಅವಕಾಶ ನೀಡದಿರುವುದರ ಬಗ್ಗೆ ತಮ್ಮ ಫೆಸ್ ಬುಕ್ ಪೇಜ್ ನಲ್ಲಿ ಬರೆದಿದ್ದರು. ಬಹಳವರ್ಷಗಳ ಹಿಂದೆ ಉಡುಪಿಯಲ್ಲಿ, ರಾಹುಲ್ ಗಾಂಧಿ ಪ್ರವಾಸದ ವೇಳೆ ಪತ್ರಕರ್ತರನ್ನ ಒಳ ಬಿಡದಿದ್ದಕ್ಕೆ ಪತ್ರಕರ್ತರು ದೊಡ್ಡ ಸೀನ್ ಕ್ರಿಯೇಟ್ ಮಾಡಿದ್ದರು, ಆದ್ರೆ ಅಮಿತ್ ಷಾ ಕಾರ್ಯಕ್ರಮಕ್ಕೆ ಪತ್ರಕರ್ತರನ್ನ ಹೊರ ಕಳುಹಿಸಿದಾಗ ಸೀನೆ ಕ್ರಿಯೆಟ್ ಅಗಿಲ್ಲ ಎಂದು ಫೇಸ್ಬುಕ್ ನಲ್ಲಿ ಬರೆದಿದ್ದರು.
ಇದಕ್ಕೆ ಕಮೆಂಟ್ ಹಾಕಿದ ವಿಶ್ವಾಸ್ ಶೆಟ್ಟಿ ಮಾಧ್ಯಮ ಮಂದಿಯವರನ್ನೆಲ್ಲಾ ಟೀಕಿಸುವ ಭರದಲ್ಲಿ ಅಮಿತ್ ಷಾ ಕಾರ್ಯಾಕ್ರಮಕ್ಕೆ ಕೊಟ್ಟಷ್ಟು ಪ್ರಚಾರ ಸಿ ಎಂ ಕಾರ್ಯ ಕ್ರಮಕ್ಕೆ ಕೊಡೊದಿಲ್ಲ, ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳು ಮಾಧ್ಯಮದಲ್ಲಿ ದೊಡ್ಡದಾಗಿ ಬರುತ್ತೆ ,ಕಾಂಗ್ರೆಸ್ ಸುದ್ದಿಗಳು ಸಣ್ಣದಾಗಿ ಬರುತ್ತೆ ಹೀಗಾಗಿ ಬಕೆಟ್ ಮಾಧ್ಯಮ ಅಂತಾ ಬರೆದಿದ್ದಾನೆ.
ಸುಮಾರು ೨೮೮ ಕಮೆಂಟ್ಗಳನ್ನ ಮಾಧ್ಯಮದ ವಿರುದ್ದ ಮಾಡಿದ್ದಾರೆ. ಅಷ್ಟೇ ಅಲ್ಲ ಪತ್ರಿಕಾ ಧರ್ಮದ ಬಗ್ಗೆ ಇಲ್ಲಿನ ಪತ್ರಕರ್ತರಿಗೆ ಗೊತ್ತಿಲ್ಲ ,ನಾನು ಕ್ಲಾಸ್ ತಗೊಳ್ಳುತ್ತೆನೆ ಅಂದಿದ್ದಾರೆ.
ಫೇಸ್ಬುಕ್ನಲ್ಲಿ ಪತ್ರಕರ್ತರು ಹಾಗೂ ಐಟಿ ಸೆಲ್ ಅಧ್ಯಕ್ಷನಿಗೂ ಭಾರೀ ಚರ್ಚೆ ಆಗಿದ್ದು, ಪತ್ರಕರ್ತರ ಮೇಲೆ ವೃಥ ಅರೋಪ ಮಾಡಿರುವ ವಿಶ್ವಾಸ್ ಶೆಟ್ಟಿ ದಾಖಲೆಗಳನ್ನು ತೋರಿಸಲು ಅಗ್ರಹಿದರು.
ಅದ್ರೆ ಕ್ಷಮೆ ಕೇಳೋ ಬದಲು ಉಡಾಫೆ ಉತ್ತರಗಳನ್ನು ನೀಡಿದ ಕಾರಣ ,ಪ್ತತ್ರಕರ್ತರು ಹಾಗೂ ವಿಶ್ವಾಸ್ ಶೆಟ್ಟಿ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿನಡೆದವು,
ನಂತರ ಕಾಂಗ್ರೆಸ್ ನ ಹಿರಿಯ ನಾಯಕರು ಹಾಗೂ ಜಿಲ್ಲಾಧ್ಯಕ್ಷರು ಮಧ್ಯ ಪ್ರವೇಶ ಮಾಡಿ ಸಂಧಾನ ಮಾತುಕತೆ ನಡೆಸಿದರು. ಕೊನೆಗೆ ತಾನು ಮಾಡಿದ ತಪ್ಪಿಗೆ ಮಾಧ್ಯಮ ಮಂದಿ ಬಳಿ ಕ್ಷಮೆ ಕೇಳಿದರು.
Comments are closed.