ಕರಾವಳಿ

ಕುಡುಪು ದೇವಳದಲ್ಲಿ ಮಹಾಚಂಡಿಕಾ ಯಾಗ ಸಂಪನ್ನ

Pinterest LinkedIn Tumblr

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರದಂದು ಶ್ರೀ ದೇವಿ ದೇವರಿಗೆ ಕಲಶಾಭಿಷೇಕ, ಪ್ರಸನ್ನಪೂಜೆ ಹಾಗೂ ದೇವಳದ ಪ್ರಾಂಗಣದಲ್ಲಿ ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟರಮಣ ಅಸ್ರಣ್ಣರ ಪೌರೋಹಿತ್ಯದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ಮಹಾಚಂಡಿಕಯಾಗ ಸಂಪನ್ನಗೊಂಡಿತ್ತು.

ಸುಮಾರು ಹತ್ತು ಸಹಸ್ರದಷ್ಟು ಶೇಷ ವಸ್ತ್ರ ವಿತರಣೆ :

ಈ ಕ್ಷೇತ್ರಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೂ ಶ್ರೀ ದೇವರ ಅನುಗ್ರಹ ಪ್ರಸಾದ ರೂಪದಲ್ಲಿ ಶ್ರೀ ದೇವರ ಶೇಷ ವಸ್ತ್ರ (ರವಿಕೆಕಣ), ಬಳೆ, ಹೂ ಹಾಗೂ ಕುಂಕುಮ ನೀಡಿ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಸುಮಾರು ಹದಿನೈದು ಸಹಸ್ರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದ್ದು, ಕ್ಷೇತ್ರಕ್ಕೆ ಆಗಮಮಿಸುವ ಎಲ್ಲಾ ಭಕ್ತರಿಗೂ ಪೂರ್ವಾಹ್ನ ಹಾಗೂ ಸಂಜೆ ಉಪಹಾರ ವ್ಯವಸ್ಥೆ ಮತ್ತು ರಾತ್ರಿ ಹೊತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನವೂ ಸಹಸ್ರಾರು ಭಕ್ತರು ಶ್ರೀ ದೇವರ ಪ್ರಸಾದ ಸ್ವೀಕರಿಸುತ್ತಿರುವರು.

Comments are closed.