ಮಂಗಳೂರು ಫೆಬ್ರವರಿ 23: ಮಂಗಳೂರು ಮಹಾನಗರಪಾಲಿಕೆಯ 20 ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಫೆಬ್ರವರಿ 8 ರಂದು ಪೂರ್ವಾಹ್ನ 11.30ಕ್ಕೆ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಹಾನಗರಪಾಲಿಕೆ ವಿಶೇಷ ಸಭೆ 26ರಂದು
ಮಂಗಳೂರು ಫೆಬ್ರವರಿ 23:ಮಂಗಳೂರು ಮಹಾನಗರಪಾಲಿಕೆಯ ಪರಿಷತ್ತಿನ ವಿಶೇಷó ಸಭೆಯು (ಬಜೆಟ್) ಫೆಬ್ರವರಿ 26 ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಪರಿಷತ್ತು ಕಾರ್ಯದರ್ಶಿ ಇವರ ಪ್ರಕಟಣೆ ತಿಳಿಸಿದೆ.