ಕರಾವಳಿ

ಕರಾವಳಿಗೆ ಆಗಮಿಸಿದ ಮಳಯಾಳಂನ ಸೂಪರ್ ಸ್ಟಾರ್‌ಗಳು : ಮೋಹನ್ ಲಾಲ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

Pinterest LinkedIn Tumblr

ಮಂಗಳೂರು, ಫೆಬ್ರವರಿ 15 : ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಚಿತ್ರವೊಂದರ ಚಿತ್ರೀಕರಣಕ್ಕಾಗಿ ಕರಾವಳಿಗೆ ಆಗಮಿಸಿರುವ ಅವರು ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಸಹ ನಟರೊಂದಿಗೆ ಗುರುವಾರ ಸುಬ್ರಹ್ಮಣ್ಯನ ದರ್ಶನ ಪಡೆದು, ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಲಯಾಳಂನ ಬಹುನಿರೀಕ್ಷಿತ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ಎಂಬಲ್ಲಿ ನಡೆಯುತ್ತಿದ್ದು, ಚಿತ್ರದಲ್ಲಿ ನಿವಿನ್ ಪೌಲ್, ಪ್ರಿಯಾ ಆನಂದ್ ಮತ್ತು ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಸಹ ನಟರೊಂದಿಗೆ ಗುರುವಾರ ಸುಬ್ರಹ್ಮಣ್ಯನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮೋಹನ್ ಲಾಲ್‌ ಅಭಿಮಾನಿಗಳು‌ ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಕೇರಳದ ಸಿನಿಮಾ ನಾಯಕರ ದಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಪ್ರಸಿದ್ಧ ಸಿನಿಮಾ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಹಾಗೂ ನಿವಿನ್ ಪೌಲಿ, ಸಿನಿಮಾ ನಟಿ ಪ್ರಿಯಾ ಆನಂದ್ ಸೇರಿದಂತೆ ಚಿತ್ರ ತಂಡದ ದಿಗ್ಗಜರು ಎರಡು ವಿಭಿನ್ನ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ರೋಷನ್ ಆಂಡ್ರೋಸ್ ನಿರ್ದೇಶನದಲ್ಲಿ ಮಲೆಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ’ಕಾಯಂಕುಳಂ ಕೊಚ್ಚುನ್ನಿ’ ಚಿತ್ರದಲ್ಲಿ ನಾಯಕನಾಗಿ ನಿವಿನ್ ಪೌಲಿ, ನಾಯಕಿಯಾಗಿ ಪ್ರಿಯಾ ಆನಂದ್ ಹಾಗೂ ಅತಿಥಿ ನಟನಾಗಿ ಮೋಹನ್ ಲಾಲ್ ನಟಿಸುತ್ತಿದ್ದಾರೆ. ಚಿತ್ರೀಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಲ್ಯ ಹಾಗೂ ಪದವು ಪರಿಸರದಲ್ಲಿ ನಡೆಸಲಾಗುತ್ತಿದ್ದು, ಕ್ಯಾಮೆರಾಮೆನ್ ಆಗಿ ವಿನೋದ್ ಪ್ರಧಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನೊಂದೆಡೆ ಬಹುಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಮಲೆಯಾಳಂ ಪ್ರಸಿದ್ಧ ನಟ ಮಮ್ಮುಟ್ಟಿ ಅಭಿನಯದ ’ಮಾಮಾಂಗಂ’ ಚಿತ್ರದ ಚಿತ್ರೀಕರಣ ವನ್ನು ಕೊಯಿಲ ಫಾರ್ಮ್ ನಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಪ್ರಸಿದ್ಧ ನಟರ ವಾಸ್ತವ್ಯಕ್ಕಾಗಿ ಕುಕ್ಕೇ ಸುಬ್ರಹ್ಮಣ್ಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಡಬ ತಾಲೂಕಿನ ಎರಡೂ ಕಡೆಗಳಲ್ಲಿ ಏಕಕಾಲದಲ್ಲಿ ಸಿನಿಮಾಗಳ ಚಿತ್ರೀಕರಣಗೊಳ್ಳುತ್ತಿರುವುದು ಪ್ರಸಿದ್ಧ ನಟರ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದು, ಅಭಿಮಾನಿಗಳು ಸಾಲು ಸಾಲಾಗಿ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರೆ.

Comments are closed.