ಅಂತರಾಷ್ಟ್ರೀಯ

ಎರಡನೇ ಬಾರಿಗೆ ನೇಪಾಲ ಪ್ರಧಾನಿಯಾಗಿ ಕೆ ಪಿ ಶರ್ಮಾ ಓಲಿ

Pinterest LinkedIn Tumblr


ಕಾಠ್ಮಂಡು: ಕೆ ಪಿ ಶರ್ಮಾ ಓಲಿ ಅವರಿಂದು ಎರಡನೇ ಬಾರಿಗೆ ನೇಪಾಲ ಪ್ರಧಾನಿಯಾದರು.

ಎರಡು ತಿಂಗಳ ಹಿಂದಷ್ಟೇ ಅವರ ಎಡ ಮೈತ್ರಿ ಕೂಟ ಮಾಜಿ ಮಾವೋ ಬಂಡುಕೋರರೊಂದಿಗೆ ದೇಶದ ಐತಿಹಾಸಿಕ ಸಂಸದೀಯ ಚುನಾವಣೆಗಳಲ್ಲಿ ಪ್ರಚಂಡ ವಿಜಯ ಸಾಧಿಸಿತ್ತು. ಆ ಮೂಲಕ ನೇಪಾಲದಲ್ಲಿ ರಾಜಕೀಯ ಸ್ಥಿರತೆಯ ಆಶಾಕಿರಣ ತೋರಿಬಂದಿತ್ತು.

ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರು 65ರ ಹರೆಯದ ಓಲಿ ಅವರನ್ನು ದೇಶದ 41ನೇ ಪ್ರಧಾನಿಯಾಗಿ ನೇಮಕ ಮಾಡಿದರು.

ಚೀನ ಪರ ನಿಲುವು ಹೊಂದಿರುವವರು ಎಂದು ತಿಳಿಯಲಾಗಿರುವ ಓಲಿ ಅವರು ದೇಶದ ಪ್ರಧಾನಿಯಾಗಿ ಈ ಹಿಂದೆ 2015ರ ಅ.11ರಿಂದ 2016ರ ಆಗಸ್ಟ್‌ 3ರ ವರೆಗೆ ಸೇವೆ ಸಲ್ಲಿಸಿದ್ದರು.

ಪ್ರಧಾನಿ ಪಟ್ಟಕ್ಕೆ ಓಲಿ ಅವರನ್ನು ಯುಸಿಪಿಎನ್‌-ಮಾವೋವಾದಿ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ನೇಪಾಲ, ಮತ್ತು ಮಾಧೇಶಿ ಹಕ್ಕುಗಳ ವೇದಿಕೆ – ಡೆಮೋಕ್ರಾಟಿಕ್‌ ಹಾಗೂ ಇತರ 13 ಸಣ್ಣ ಪಕ್ಷಗಳು ಬೆಂಬಲಿಸಿದ್ದವು.

-ಉದಯವಾಣಿ

Comments are closed.