ಕರಾವಳಿ

ಫೆ.17: ಚೇತನಾ ಬಾಲ ವಿಕಾಸ ಕೇಂದ್ರದ ಬೆಳ್ಳಿ ಹಬ್ಬ ಸಂಭ್ರಮಾಚರಣೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.15: ಮಂಗಳೂರಿನ ವಿಟಿ ರಸ್ತೆಯಲ್ಲಿರುವ ಸೇವಾ ಭಾರತಿ ಸಂಸ್ಥೆಯ ಅಂಗ ಸಂಸ್ಥೆಯಾದ ಚೇತನಾ ಬಾಲ ವಿಕಾಸ ಕೇಂದ್ರ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದು, ಇದರ ವರ್ಷಾಚರಣೆ ಕಾರ್ಯಕ್ರಮ ಫೆ.17ರಂದು ನಗರದ ಪುರಭವನದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸೇವಾ ಭಾರತಿ ಸಂಸ್ಥೆಯ ಟ್ರಸ್ಟಿ ಸುಮತಿ ಶೆಣೈಅವರು,ರಜತ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಕೌಶಲ್ಯ ಮತ್ತು ಉದ್ಯಮ ಶೀಲತೆಯ ಸಚಿವ ಅನಂತ್ ಕುಮಾರ್ ಹೆಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಶ್ರೀ ರಾಮಕೃಷ್ಣ ಮಠದ ಸ್ವಾಮಿ ಚಿತಕಾಮಾನಂದಜಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕಿ ಫಿಲೋಮಿನಾ ಲೋಬೊ, ನಿಟ್ಟೆ ಡೀಮ್ಡ್ ವಿ.ವಿಯ ಉಪ ಕುಲಪತಿ ಸತೀಶ್ ಕುಮಾರ್ ಭಂಡಾರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಚೇತನ ಬಾಲ ವಿಕಾಸ ಸಂಸ್ಥೆಯಲ್ಲಿ 93 ಮಕ್ಕಳಿದ್ದು 41 ಬುದ್ದಿ ಮಾಂದ್ಯ ಮಕ್ಕಳು,18 ಡೌನ್ಸಿಂಡ್ರೋಮ್ 11 ಆಟಿಸಂ ಸಮಸ್ಯೆಯ ಮಕ್ಕಳು ಇದ್ದಾರೆ. ಈ ಡೇ ಕೇರ್ ಕೇಂದ್ರದಲ್ಲಿ ಪಿಸಿಯೋಥೆರಪಿ, ಸ್ಪೀಚ್ ಥೆರಪಿ, ಕಂಪ್ಯೂಟರ್ ಶಿಕ್ಷಣ, ಪೂರ್ವ ಪ್ರಾಥಮಿಕ ಶಿಕ್ಷಣ, ತಮ್ಮ ಕೆಲಸಗಳನ್ನು ತಾವು ನಿವಹಿಸಲು ಸಾಧ್ಯವಾಗುವ ಜ್ಞಾನ, ಕೌಶಲ ತರಬೇತಿ, ವೃತ್ತಿ ಶಿಕ್ಷಣ ಮತ್ತು ಹೋಮಿಯೋಪಥಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಉಳ್ಳಾಲದಲ್ಲಿ ಒಂದು ಡೇ ಕೇರ್ ಸೆಂಟರನ್ನು ಶೀಘ್ರದಲ್ಲಿ ಆರಂಭಿಸುವ ಗುರಿ ಇದೆ ಎಂದು ಸುಮತಿ ಶೆಣೈ ತಿಳಿಸಿದರು.

ಸೇವಾ ಭಾರತಿ ಸಂಸ್ಥೆಯ ವತಿಯಿಂದ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ತಾತ್ಕಲಿಕ ವಸತಿ ಗೃಹವನ್ನು ಒದಗಿಸುವುದು, ಮಾನಸಿಕ ಸಮಸ್ಯೆಯ ಹಿರಿಯ ನಾಗರಿಕರಿಗೆ ಪುನರ್ವಸತಿ ಕೇಂದ್ರವನ್ನು ಆರಂಭಿಸುವುದು, ಭಿನ್ನ ಸಾಮರ್ಥ್ಯದ ಯುವಜನರಿಗೂ ಪುನರ್ವ್ಸತಿ ಕೇಂದ್ರ ಆರಂಬಿಸುವುದು. ದೃಷ್ಟಿ ದೋಷ ದ ಬಗ್ಗೆ ಜಿಲ್ಲೆಯಲ್ಲಿ ಮುಂಚಿತವಾಗಿ ಪತ್ತೆ ನಡೆಸುವ ಶಿಬಿರ ನಡೆಸುವುದು, ಆರಂಭದ ಹಂತದಲ್ಲಿ ಅಂಗ ವೈಕಲ್ಯದ ಬಗ್ಗೆ ತಪಾಸಣೆ ನಡೆಸಿ ಚಿತಿತ್ಸೆ ನೀಡಲು ತಪಾಸಣಾ ಶಿಬಿರ ನಡೆಸುವುದು. ನಿರಂತರ ವೃತ್ತಿ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ಇದೆ.

ಪ್ರಸಕ್ತ ಹಿರಿಯ ನಾಗರಿಕರಿಗಾಗಿ ಆಸರೆ ಕೇಂದ್ರ, ಯೋಗ ಕೇಂದ್ರ, ಅಂಧರಿಗೆ ಶಿಕ್ಷಣ ಮತ್ತು ಅವರಿಗೆ ನಡೆದಾಡುವ ಕೌಶಲ್ಯ ನೀಡುವ ಕೇಂದ್ರ ಆರಂಭಿಸಲಾಗಿದೆ. ಎಂಡೋಸಲ್ಫಾನ್ ಪೀಡಿತರಿಗೆ ಡೇ ಕೇರ್ ಸೆಂಟರ್ ನ್ನು ಸರಕಾರದ ಸಹಕಾರದೊಂದಿಗೆ ಕೊಯಿಲ ಮತ್ತು ಕೊಕ್ಕಡದಲ್ಲಿ ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ ಜಿಲ್ಲೆಯಲ್ಲಿ ಇನ್ನೂ 5 ಹೊಸ ಕೇಂದ್ರಗಳನ್ನು ಆರಂಭಿಸುವ ಗುರಿ ಇದೆ. ಜೊತೆಗೆ ಜಿಲ್ಲೆಯ ಪ್ರತಿ ಕೇಂದ್ರದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ವಿಶೇಷ ಶಾಲೆಯನ್ನು ಸೇವಾ ಭಾರತಿಯಿಂದ ಆರಂಭಿಸು ಗುರಿ ಇದೆ ಎಂದು ಸುಮತಿ ಶೆಣೈ ತಿಳಿಸಿದರು.

ಸೇವಾ ಭಾರತಿಯ ಟ್ರಸ್ಟಿ ವಿನೋದ್ ಶೆಣೈ ಮಾತನಾಡಿ, ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದ ಮಣ್ಣ ಗುಡ್ಡದ ಬಳಿಯ ಮಹಿಳೆಯರ ಮುಂದಾಳತ್ವದಲ್ಲಿ ತಂಡವೊಂದು 1993 ಎಪ್ರಿಲ್ 4 ಚೇತನಾ ಸಂಸ್ಥೆಯನ್ನು ಸ್ಥಾಪಿಸಿ ಸಮಾಜದಲ್ಲಿ ದುರ್ಬಲರ ಸೇವೆಯನ್ನು ಮಾಡಲು ಮುಖ್ಯವಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ಚೇತನಾ ಬಾಲ ವಿಕಾಸ ಕೇಂದ್ರವನ್ನು ಆರಂಭಿಸಿದೆ. ಆರಂಭದಲ್ಲಿ ಮಂಗಳೂರು ನಗರಾದ್ಯಂತ 35 ಸಾವಿರ ಮನೆಗಳಿಗೆ ಭೇಟಿ ನೀಡಿ ಸಮಾಜ ಸೇವಕಿ ಇಂದು ಮತಿ ರಾವ್ ಅವರ ಮಾರ್ಗದರ್ಶನ ನೀಡಿದರು.ಆಗಿನ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕಿ ಫಿಲೋಮಿನಾ ಲೋಬೋ ಚೇತನಾ ಸಂಸ್ಥೆಗೆ ಸಹಾಯ ಹಸ್ತ ನೀಡಿದರು. ಚೇತನ ಸಂಸ್ಥೆಗೆ ಗಾಂಧಿ ನಗರ ಮತ್ತು ಅತ್ತಾವರ ಸರಕಾರಿ ಶಾಲೆಯಲ್ಲಿ ಕೇಂದ್ರ ನಡೆಸಲು ಅನುಮತಿ ನೀಡಿದರು.

ಇಲ್ಲಿ ಉತ್ತಮ ಶಿಕ್ಷಣ ತರಬೇತಿ, ಚಿಕಿತ್ಸೆ ನೀಡಲು ಸಾಧ್ಯವಾಯಿತು. ದಿವಂಗತ ನಾರಾಯಣ ಭಕ್ತ ಮತ್ತು ನಾರಾಯಣ ಶೆಣೈ ಮುತುವರ್ಜಿಯಿಂದ ಈ ಎರಡು ಕೇಂದ್ರಗಳಲ್ಲಿರುವವರನ್ನು ಬಾಲ ಮಾರುತಿ ವ್ಯಾಯಾಮ ಮಂಡಳಿಯ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಟ್ಟ ಕಾರಣ ಒಂದೇ ಕೇಂದ್ರದಲ್ಲಿ ಚೇತನಾ ಬಾಲ ವಿಕಾಸ ಕೇಂದ್ರ ಕಾರ್ಯನಿರ್ವಹಿಸಲು ಸಾಧ್ಯವಾಯಿತು.

ಈ ಸೇವಾ ಕಾರ್ಯದ ಅವಶ್ಯಕತೆಗಳಿಗೆ ಆರ್ಥಿಕ ಅಡಚಣೆ ಬಂದಾಗ ಪ್ರಕಾಶ್ ಬೀಡಿ ಸಂಸ್ಥೆಯ ಶಂಕರ ಪ್ರಭು ಪ್ರಮುಖ ದಾನಿಯಾಗಿ ಸಂಸ್ಥೆಗೆ ಆರ್ಥಿಕ ಬಲ ನೀಡಿದರು. ಇದೇ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್ನ ಅಧ್ಯಕ್ಷ ಕೆ.ವಿ.ಕಾಮತ್ ಚೇತನಾ ಸಂಸ್ಥೆಗೆ ದೇಣಿಗೆ ನೀಡಿ ಬೆಂಬಲಿಸಿದರು ಎಂದು ತಿಳಿಸಿದರು. ಚೇತನಾ ಬಾಲ ವಿಕಾಸ ಕೇಂದ್ರದ ಮುಖೋಪಾಧ್ಯಾಯಿನಿ ಸುಪ್ರಿತಾ ಎಚ್.ಎಂ ಈ ವೇಳೆ ಉಪಸ್ಥಿತರಿದ್ದರು.

Comments are closed.