ಕರಾವಳಿ

ಉಡುಪಿಯ ವಿವಾಹಿತ ಮಹಿಳೆ ನಾಪತ್ತೆ

Pinterest LinkedIn Tumblr

ಉಡುಪಿ: ಉಡುಪಿ ಉದ್ಯಾವರ ಮೇಲ್ಪಟೆ ಗ್ರಾಮದಲ್ಲಿ ವಾಸವಿರುವ ಸಂತೋಷ ಕುಮಾರ್ ಎಂಬವರ ಪತ್ನಿ ಸೀಮಾ (20) ಎಂಬವರು ಮನೆಯಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

5 ಅಡಿ ಎತ್ತರ ಹೊಂದಿದ್ದು, ಗೋಧಿ ಮೈ ಬಣ್ಣ ಹೊಂದಿರುವ ಇವರು ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕನ್ನಡ ತುಳು ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿ ಪತ್ತೆಯಾದಲ್ಲಿ ಕಾಪು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0820-2551033, 9480805449 ಗೆ ಸಂಪರ್ಕಿಸುವಂತೆ ಕಾಪು ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆ ತಿಳಿಸಿದೆ.

Comments are closed.