ಕರಾವಳಿ

ಮುಂಬಯಿ ಕುಲಾಲ ಸಂಘದ ಕ್ರೀಡೋತ್ಸವ

Pinterest LinkedIn Tumblr

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಚರ್ಚ್‌ಗೇಟ್‌-ದಹಿಸರ್‌ ಪ್ರಾದೇಶಿಕ ಸಮಿತಿ ಯ ವತಿಯಿಂದ ಇತ್ತೀಚಿಗೆ ಕಾಂದಿವಲಿ ಪಶ್ಚಿಮದ ಎಕ್ಸ್‌ಪ್ರೆಸ್‌ ಹೈವೇ ಸಮೀಪದ ಸಾಯಿಗ್ರೌಂಡ್‌ನ‌ಲ್ಲಿ ಕ್ರೀಡೋತ್ಸವನ್ನು ಆಯೋಜಿಸಲಾಗಿದ್ದು ಸಂಜೆ ನಡೆದ ಕ್ರೀಡೋತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷರಾದ ದೇವದಾಸ್‌ ಪಿ. ಕುಲಾಲ್‌ ಅವರು ವಹಿಸಿದ್ದರು.

ಗೌರವ ಅತಿಥಿಯಾಗಿ ಜ್ಯೋತಿ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ಆಗಮಿಸಿದ್ದರು. ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ರಾಘು ಪಿ. ಮೂಲ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳಾದ ಐತು ಮೂಲ್ಯ, ಚೇತನಾ ಕುಂದರ್‌, ಜಗದೀಶ್‌ ಬಂಜನ್‌, ಸುಕುಮಾರ್‌ ಸಾಲ್ಯಾನ್‌, ವಿಜಯ ಸಾಲ್ಯಾನ್‌, ನರೇಂದ್ರ ಬಂಗೇರ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಿನೇಶ್‌ ಬಿ. ಕುಲಾಲ್‌ ಹಾಗೂ ಇತರ ಗಣ್ಯರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸತ್ಕರಿಸಲಾಯಿತು.

ಸಮಾರಂಭದಲ್ಲಿ ಆರ್‌ಬಿಐ ಫುಟ್ಬಾಲ್‌ ತರಬೇತುದಾರ ಸುರೇಶ್‌ ಬಂಜನ್, ಉದ್ಯಮಿ ಐ. ಆರ್‌. ಮೂಲ್ಯ, ಸುನಿಲ್‌ ಆರ್‌. ಸಾಲ್ಯಾನ್‌, ಉದ್ಯಮಿ ಎ. ಬಾಲಕೃಷ್ಣ ಸಾಲ್ಯಾನ್‌, ಅಶೋಕ್‌ ಸಾಲ್ಯಾನ್‌, ವಿಠಲ ಎಸ್‌. ಕುಲಾಲ್‌, ಕುಲಾಲ ಕೇಂದ್ರ ಸಮಿತಿಯ ಉಪ ಕಾರ್ಯಾಧ್ಯಕ್ಷ, ಸಮಿತಿಯ ಗೌರವ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ಜಯ ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಘು ಆರ್‌. ಮೂಲ್ಯ, ಉಪ ಕಾರ್ಯಾಧ್ಯಕ್ಷ ಗಣೇಶ್‌ ಬಿ. ಸಾಲ್ಯಾನ್‌, ಕಾರ್ಯದರ್ಶಿ ಅರುಣ್‌ ಡಿ. ಬಂಗೇರ, ಕೋಶಾಧಿಕಾರಿ ಸತೀಶ್‌ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಲತಾ ವಿ. ಸಾಲ್ಯಾನ್‌, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್‌, ಕಾರ್ಯದರ್ಶಿ ಅಶ್ವಿ‌ನಿ ಎ. ಬಂಗೇರ, ಸಮನ್ವಯಕ ಹರೀಶ್‌ ಜಿ. ಬಂಗೇರ, ಕ್ರೀಡಾ ಸಮಿತಿಯ ಯುವ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಕ್ರಿಕೆಟ್‌, ಯುವತಿಯರಿಗೆ ಬಾಕ್ಸ್‌ ಕ್ರಿಕೆಟ್‌, ಮಹಿಳೆಯರಿಗೆ ತ್ರೋಬಾಲ್‌, ಹದಿನೇಳು ವರ್ಷದೊಳಗಿನ ಯುವಕರಿಗೆ ರಿಂಕ್‌ ಫುಟ್ಬಾಲ್‌, ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ-ಜಗ್ಗಾಟ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ವಯೋಮಿತಿಗೆ ಅನುಗುಣವಾಗಿ ರನ್ನಿಂಗ್‌ ರೇಸ್‌ ಇನ್ನಿತರ ವೈವಿಧ್ಯಮಯ ಸ್ಪರ್ಧೆಗಳು ನಡೆದವು.

ಸಮಾಜ ಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿದರು. ಮನೋಜ್‌ ಸಾಲ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.