ಕರಾವಳಿ

ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ : ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ

Pinterest LinkedIn Tumblr

ಮಂಗಳೂರು ಜನವರಿ.30: ತುಳುನಾಡಿನ ಕಾರಣಿಕ ದೈವ ಸ್ವಾಮಿ ಕೊರಗಜ್ಜನ ದೈವಸ್ಥಾನಕ್ಕೆ ಆಹಾರ ಸಚಿವ ಯುಟಿಖಾದರ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿರೋದು ಇದೀಗ ಮುಸ್ಲಿಂ ಮೂಲಭೂತವಾದಿಗಳ ವಿರೋಧಕ್ಕೆ ಕಾರಣವಾಗಿದೆ.

ತುಳುನಾಡು ದೇವ-ದೈವಗಳ ಬೀಡು. ಇಲ್ಲಿ ದೈವಾರಾಧನೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ತುಳುನಾಡಿನಲ್ಲಿ ದೈವಗಳನ್ನು ಧರ್ಮ ಭೇದ ಮರೆತು ಎಲ್ಲರೂ ಆರಾಧಿಸುತ್ತಾರೆ .ಆದರೆ ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ದ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ನರ್ತನ ಸೇವೆ ನಡೆದಿದ್ದು ಈ ಸಂಧರ್ಭದಲ್ಲಿ ಸಚಿವ ಯುಟಿಖಾದರ್ ಕೂಡಾ ಭೇಟಿ ನೀಡಿದ್ದರು.

ಭೇಟಿ ನೀಡಿದ್ದು ಮಾತ್ರವಲ್ಲದೆ ಸ್ವತಃ ದೈವ ಪಾತ್ರಿಯಿಂದ ಕೊರಗಜ್ಜನ ಪ್ರಸಾದ ವನ್ನೂ ಸ್ವೀಕರಿಸಿದ್ದರು. ಆದರೆ ಇದೀಗ ಖಾದರ್ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿರೋದು ಮುಸ್ಲಿಂ ಮೂಲಭೂತವಾದಿಗಳ ವಿರೋಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಖಾದರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದಾನಾತ್ಮಕವಾಗಿ ಟೀಕೆಗಳನ್ನು ಹರಿಬಿಡಲಾಗುತ್ತಿದೆ.

ಘಟನೆಯ ವಿವರ :

ಕೆಲದಿನಗಳ ಹಿಂದೆ ಉಳ್ಳಾಲದ ಕೊರಗಜ್ಜನ ಕ್ಷೇತ್ರದಲ್ಲಿ ಕೋಲ ಸೇವೆ ನಡೆದಿದ್ದು ಈ ಸಂಧರ್ಭದಲ್ಲಿ ಸಚಿವ ಖಾದರ್ ಕೂಡಾ ಭೇಟಿ ನೀಡಿದ್ದರು. ಭೇಟಿ ನೀಡಿದ್ದು ಮಾತ್ರವಲ್ಲದೆ ಸ್ವತಃ ದೈವ ಪಾತ್ರಿಯಿಂದ ಕೊರಗಜ್ಜನ ಪ್ರಸಾದ ಸ್ವೀಕರಿದ್ದರು.
ಖಾದರ್ ವಿರುದ್ಧ ಕೆಲ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದಾನಾತ್ಮಕವಾಗಿ ಟೀಕಿಸಿದ್ದು ಮುಸ್ಲಿಂ ಆಗಿ ಖಾದರ್ ಹಿಂದೂ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂಗಳ ಕ್ಷೇತ್ರಕ್ಕೆ ಭೇಟಿ ನೀಡಿದ ಮಾತ್ರಕ್ಕೆ ಹಿಂದೂಗಳು ಮತ ನೀಡುವುದಿಲ್ಲ ಸುಮ್ಮನೆ ನಾಟಕವಾಡೋದು ಬಿಟ್ಟು ಮುಸ್ಲಿಂ ಧರ್ಮದ ಅನುಯಾಯಿಯಾಗಿ ಮುಂದುವರಿಯಿರಿ ಎಂದು ಟೀಕಿಸಿದ್ದಾರೆ.

ಈ ಹಿಂದೆ ಕೇವಲ ಹಿಂದೂ ಸಂಘಟನೆಗಳ ಮುಖಂಡರು ಸೇರಿದಂತೆ ಬಿಜೆಪಿ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ ಮುಸ್ಲಿಂ ಮೂಲಭೂತವಾದಿಗಳು ಇದೀಗ ಸಚಿವರನ್ನೇ ಟಾರ್ಗೆಟ್ ಮಾಡಿರುವ ಮೂಲಕ ಧರ್ಮ-ಧರ್ಮಗಳ ನಡುವೆ ದ್ವೇಷ ಬಿತ್ತುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಜನಸಾಮಾನ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಚಿವ ಯು.ಟಿ.ಖಾದರ್ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಹಾಗು ಪ್ರಸಾದ ಸ್ವೀಕರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿವೆ.

Comments are closed.