
ಮಂಗಳೂರು: ಕರಾವಳಿ ತಟರಕ್ಷಣಾ ಪಡೆಯ ಮಂಗಳೂರು ಜಿಲ್ಲಾ ಕೇಂದ್ರವು ಸಾವರ್ಜನಿಕರು ಮತ್ತು ಅಧಿಕಾರಿಗಳ ಜತೆಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡು ತನ್ನ ಕಾರ್ಯ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಕರಾವಳಿ ತಟ ರಕ್ಷಣಾ ಪಡೆಯ ಡಿಐಜಿ ಎಸ್.ಎಸ್.ದಸಿಲಾ ಅವರು ಹೇಳಿದರು.

ಮಾಧ್ಯಮದವರಿಗಾಗಿ ಆಯೋಜಿಸಿದ್ದ ಸಾಗರದಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳು ಬಿಕ್ಕಟ್ಟಿನ ಮತ್ತು ಇತರ ಎಲ್ಲ ಸಂಧರ್ಭಗಳಲ್ಲಿ ಸಾರ್ವಜನಿಕಕರ ಜತೆ ಹಾಗೂ ಇತರ ಸಂಸ್ಥೆಗಳ ಜತೆ ನಿಕಟ ಸಂಬಂಧವನ್ನು ಇರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಅಯೋಜಿಸುತ್ತಿದೆ ಎಂದರು.

ವಿಧ್ಯಾರ್ಥಿಗಳೊಂದಿಗೆ ಉತ್ತಮ ಭಾಂಧವ್ಯ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಗಣರಾಜೋತ್ಸವದಂದು ಕರಾವಳಿ ತಟರಕ್ಷಣಾ ಪಡೆಯು ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಧ್ವಜಾರೋಹಣಗೈಯಲಿದೆ. ಅದರಲ್ಲೂ ವಿಧ್ಯಾರ್ಥಿನಿಯರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಅಧ್ಯತೆ ನೀಡಲಿದೆ. ರಕ್ತದಾನ ಶಿಬಿರ, ವಿಧ್ಯಾರ್ಥಿಗಳಿಗೆ ಕರಾವಳಿ ತಟರಕ್ಷಣಾ ಪಡೆಯ ಕಚೇರಿಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗುವುದು ಎಂದರು.
Comments are closed.