ಕರಾವಳಿ

ದ್ಯಾನ ಹಾಗೂ ಚಿಂತನೆ ಮಾಡಿ ಬದುಕನ್ನು ಸಾರ್ಥಕತೆ ಮಾಡಿಕೊಳ್ಳಿ : ಡಾ. ವಿಶ್ವನಾಥ ಬದಿಕಾನ

Pinterest LinkedIn Tumblr

ಮಂಗಳೂರು ಜನವರಿ 19 : ಎಲ್ಲ ದಾಸರು, ವಚನಗಾರರು ಎಲ್ಲರು ಹೇಳಿರುವುದು ಒಂದೇ ಅಂತರಂಗ ಶುದ್ಧಿ, ದ್ಯಾನ ವೇಮನ ಚಿಂತನೆ, ದ್ಯಾನ ಮಾಡಿ, ಚಿಂತನೆ ಮಾಡಿ ಬದುಕನ್ನು ಸಾರ್ಥಕತೆಯನ್ನು ಮಾಡಿಕೊಳ್ಳಿ ಎಂದು ಸಂತ ಅಲೋಶಿಯಸ್  ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ. ವಿಶ್ವನಾಥ ಬದಿಕಾನ ಹೇಳಿದರು.

ನಗರದ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜು ಬಲ್ಮಠದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿಯ ಉಪಾನ್ಯಾಸದಲ್ಲಿ ಅಭಿಪ್ರಾಯಿಸಿದ್ದಾರೆ. ನಮ್ಮ ಹತ್ತಿರದ ಕಾಲದ ವೇಮನ, ಸಿದ್ದರಾಮ, ಅಂಬಿಗರ ಚೌಡಯ್ಯರ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ , ಆದರೆ ವಿವೇಕಾನಂದರು ಎಲ್ಲರಿಗೂ ಗೊತ್ತು, ಎಕೆಂದರೆ ಪಠ್ಯಪುಸ್ತಕದ ಭಾಗವಾಗಿರುವುದರಿಂದ ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತಲುಗಿನ ‘ವೇಮನ’ ಮಹಾಕವಿ, ಮಹಾಯೋಗಿ.ಆಂಧ್ರದ ನೆಲ್ಲೂರಿನಲ್ಲಿ 1652 ಜನಿಸಿದ ಯೋಗಿ ವೇಮನ ಅವರ ಪೂರ್ತಿ ಹೆಸರು ಗೋನ ವೇಮು ಬುದ್ಧ ರೆಡ್ಡಿ.

17ನೇ ಶತಮಾನದ ತೆಲುಗು ದಾರ್ಶನಿಕ ಕವಿ.ತೆಲುಗಿನ ಪ್ರಾಥಮಿಕ ಕವಿಗಳಲ್ಲಿ ಇತನು ಒಬ್ಬ. ಮೌಖಿಕ ಕವಿಯಾಗಿರುವ ಇತನು ದೇಶ ಸುತ್ತುತ್ತಾ ಅಥವ ಜನರ ಮದ್ಯೆ ತನ್ನ ಅಭಿಪ್ರಾಯಗಳನ್ನು ಹೇಳುತ್ತಾ, ತನ್ನ ಅಲೋಚನೆಗಳನ್ನು, ಕಾಲ, ದೇಶದ, ಕಟುಂಬದ ಕುರಿತಂತೆ, ಮನುಷ್ಯನು ಇರುವ ರೀತಿಯ ಕುರಿತಂತೆ ಮಾತ್ತಾನಾಡುವ ಕವಿ ವೇಮನ. ಕಲ್ಲು ಕಲ್ಲೇ, ಒಂದು ವೃಕ್ಷ ವೃಕ್ಷವೇ, ಒಂದು ಪ್ರಾಣಿ ಪ್ರಾಣಿಯೇ, ಒಬ್ಬ ಮಾನವನು ಮಾನವನೇ, ಶಿವನು ಮಾತ್ರವೇ ಶಿವನು ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ ಎಂದು ಹೇಳುತ್ತಿದ್ದ ಯೋಗಿ ವೇಮನ.

ದ್ಯಾನ ಎನ್ನುವುದು ಎರಡನೇ ಮೆಟ್ಟಿಲು ಕಾಯ ವಾಚ ಮನಸ್ಸಿನಿಂದ ದ್ಯಾನ ಮಾಡಿದ್ದಲ್ಲಿ ಮನಸ್ಸು ಪರಿವರ್ತನೆಯಾಗುತ್ತದೆ. ಇದರಿಂದ ಮನುಷ್ಯ ಮುಕ್ತಿಯಾಗುತ್ತಾನೆ. ದ್ಯಾನದಲ್ಲಿ ಗೆದ್ದಾಗ ಜ್ಞಾನವನ್ನು ಸಂಪಾದಿಸಬಹುದು ಎಂದು ವೇಮನರ ವಾದ. ಮನುಷ್ಯ ತಿಂದು, ಉಂಡು , ನಿದ್ದೆ ಮಾಡಲು ಹುಟ್ಟಲಿಲ್ಲ. ಸ್ವಲ್ಪ ತಿಂದು , ಸ್ವಲ್ಪ ನಿದ್ರಿಸಿ, ಮತ್ತು ಹೆಚ್ಚು ಧ್ಯಾನಮಾಡಲು ಬಂದಿದ್ದೇವೆ.

ಎರಡು ಕಣ್ಣಿರುವವನು, ಮೂರು ಕಣ್ಣಿನವನಾಗಬೇಕು, ‘ಮುಕ್ಕಣ್ಣ’ ನಾಗಬೇಕು. ಯಾವಾಗ ಮನಸ್ಸು ಶೂನ್ಯವಾಗುತ್ತದೋ ಆಗ ವಿಶೇಷವಾಗಿ ಪ್ರಾಣಶಕ್ತಿ ನಮ್ಮಲ್ಲಿ ಪ್ರವಹಿಸುತ್ತದೆ. ಅದೇ ನಮಗೆ ಬೇಕಾಗಿರುವುದು.ವೇಮನ ಅವರು ಮೊದಲು ಭೋಗಿಗಳಾಗಿದ್ದು, ಅನಂತರ ಯೋಗ ಮಾರ್ಗವನ್ನು ಅನುಸರಿಸಿದ ಆಶುಕವಿಗಳು. ಸರ್ವಜ್ಞ ಅರೆಬೆತ್ತಲೆಯ ಲೋಕ ಸಂಚಾರಿಯಾದರೆ ವೇಮನ ಪೂರ್ಣಬೆತ್ತಲೆಯ ಲೋಕ ಸಂಚಾರಿ, ಇಬ್ಬರೂ ಅನುಭವಿಗಳೂ, ಸಮಾಜಮುಖಿಗಳೂ, ಜ್ಞಾನಮುಖಿಗಳೂ ಹಾಗೂ ಮಹೋನ್ನತ ಪ್ರತಿಭೆಯುಳ್ಳವರು.

ಇವರು ಜನಸಾಮಾನ್ಯರ ಭಾವನೆಗಳಿಗೆ ಮೂರ್ತಸ್ವರೂಪವನ್ನು ನೀಡಿ ಸಮಾನ ಮನೋಧರ್ಮದ ಜನತಾ ಕವಿಗಳು ಎನಿಸಿಕೊಂಡವರು. ಕವಿ ಸರ್ವಜ್ಞ .ತ್ರಿಪದಿ ಛಂದೋ ಪ್ರಕಾರದಲ್ಲಿ ವಚನಗಳನ್ನು ರಚಿಸಿದರೆ, ಕವಿ ವೇಮನ ಪದ್ಯ ರಚಿಸಿದ್ದು ಚೌಪದಿ ಛಂದೋಪ್ರಕಾರದಲ್ಲಿ. ಪದ್ಯದ ಕೊನೆಯಲ್ಲಿ ಸರ್ವಜ್ಞರಂತೆ(ಸರ್ವಜ್ಞ) ‘ವೇಮು’ ಎಂದು ತನ್ನ ಹೆಸರನ್ನು ಸೇರಿಸುತ್ತಾನೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಾಲೇಜಿನ ಪ್ರಾಂಶುಪಾಲರಾದ ಮಾರಿಯಟ್ ಜೆ. ಮಸ್ಕರೇನಸ್, ಚಂದ್ರಹಾಸ ರೈ ಬಿ, ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

Comments are closed.