ಕರಾವಳಿ

ಬೆರಳುಗಳ ಲಟಿಗೆ ಮುರಿವುದರಿಂದ ಅಗುವ ಆಶ್ಚರ್ಯಕಾರಿ ಸಂಗತಿ

Pinterest LinkedIn Tumblr

ಡೊನಾಲ್ಡ್ ಉಂಗೆರ್ ಎಂಬ ವ್ಯಕ್ತಿಯು ಬರೋಬ್ಬರಿ 50 ವರ್ಷಗಳ ಕಾಲ ಒಂದು ವೈಜ್ಞಾನಿಕ ಪ್ರಯೋಗವನ್ನೇ ನಡೆದು, ಹೊದ್ದು, ಉಸಿರಾಡುತ್ತಿದ್ದ. ಇದು ಒಂದು ಸಿನಿಮೀಯ ಕಥೆಯೇನೋ ಎಂದು ನಿಮಗೆ ಅನಿಸಬಹುದು, ಆದರೆ ಈ ಸೈಂಟಿಫಿಕ್ ಎಕ್ಸ್ಪೆರಿಮೆಂಟ್ ತುಂಬಾ ಲಾಜಿಕಲ್ ಆಗಿ ಇತ್ತು. ಅವನ ಉದ್ದೇಶ ಕೈ ಬೆರಳುಗಳ ಲಟಿಗೆ ಮುರಿಯುವುದು ಸಂಧಿವಾತ ಅಥವಾ ಆರ್ಥ್ರೈಟಿಸ್ ಹುಟ್ಟು ಹಾಕುವುದಿಲ್ಲ ಎಂದು ತೋರಿಸುವುದು.

50 ವರ್ಷಗಳ ಕಾಲಾವಧಿಯಲ್ಲಿ ಡೊನಾಲ್ಡ್ ಸುಮಾರು 35600 ಬಾರಿಗಿಂತಲೂ ಹೆಚ್ಚು ತನ್ನ ಬಲಗೈ ಬೆರಳುಗಳ ಲಟಿಗೆ ಮುರಿದರೂ ಆತನಿಗೆ ಆರ್ಥ್ರೈಟಿಸ್ ಉಂಟಾಗಲಿಲ್ಲ. ಇದು ನಿಮಗೆ ನಗು ತರಿಸಬಹುದು, ಆದರೆ ಇದು ವೈದ್ಯಕೀಯ ಲೋಕ್ಕೆ ತುಂಬಾ ನೆರವಾದ ಕಾರ್ಯವಾಗಿತ್ತು. ಇದೇ ಕಾರಣಕ್ಕೆ ಆತನಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರೈಜ್ ಲಭಿಸಿತು! ಆದರೆ ಇಷ್ಟಕ್ಕೆ ಖುಷಿಪಡಬೇಡಿ. ಇದು ಆರ್ಥ್ರೈಟಿಸ್ ಉಂಟಾಗುವುದಿಲ್ಲ ಎಂದು ತೋರಿಸುವುದಕ್ಕೆ ತುಂಬಾ ನಿಖರವಾದ ಪುರಾವೆ ಏನಲ್ಲ. ಬೆರಳುಗಳ ಲಟಿಗೆ ಮುರಿಯುವುದು ಕೆಲವೊಮ್ಮೆ ಕೈಗಳಿಗೆ ಹಾನಿ ಉಂಟು ಮಾಡಬಹುದು. ಕೆಲವು ವಿಜ್ಞಾನಿಗಳು ಲಟಿಗೆ ಮುರಿಯುವುದರಿಂದ ಕಾರ್ಟಿಲೇಜ್ ಅಥವಾ ಎಲುಬು ಮುರಿತ ಉಂಟಾಗಬಹುದು ಎಂದು ಕೂಡ ಹೇಳಿದ್ದಾರೆ, ಆದರೆ ಅದರ ಮೇಲೆಯೂ ಕೂಡ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಕೊನೆಯಲ್ಲಿ ನಮಗೆ ಲಟಿಗೆ ಮುರಿಯುವುದು ಆರ್ಥ್ರೈಟಿಸ್ ಉಂಟು ಮಾಡುವುದೇ ಎಂದು ನಿಖರವಾಗಿ ತಿಳಿಯಲು US ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಬಳಿ ಹೋದೆವು. ಇವರು ಈ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಹಲವಾರು ಸಂಶೋಧನಾಕಾರರಿಗೆ ಧನಸಹಾಯ ಮಾಡುತ್ತಿದ್ದಾರೆ. ಇಲ್ಲಿ ಸಂಶೋಧನಾಕಾರರು ತಮ್ಮ ಸಂಸ್ಥೆಗೆ ಬಂದ ಎಲ್ಲಾ ರೋಗಿಗಳ ಕಳೆದ ಐದು ವರ್ಷಗಳ X-ray ಸ್ಕ್ಯಾನ್ ಫೋಟೋಗಳನ್ನ ಪರೀಕ್ಷಿಸಿದರು. ಅವರು ಆರ್ಥ್ರೈಟಿಸ್ ಇರುವ ಜನರನ್ನ ಒಂದು ಗುಂಪಾಗಿ, ಆರ್ಥ್ರೈಟಿಸ್ ಇಲ್ಲದವರನ್ನ ಒಂದು ಗುಂಪಾಗಿ ವಿಂಗಡಿಸಿದರು. ಆಗ ದೊರೆತ ಫಲಿತಾಂಶಗಳು ನಿಜಕ್ಕೂ ಆಶ್ಚರ್ಯಕರವಾದವು!

ಅಲ್ಲಿ ಯಾರೆಲ್ಲಾ ಲಟಿಗೆ ಮುರಿಯುವ ಅಭ್ಯಾಸ ಹೊಂದಿರಲಿಲ್ಲವೋ, ಅಂತವರಲ್ಲೇ ಹೆಚ್ಚಾಗಿ ಆರ್ಥ್ರೈಟಿಸ್ ಕಂಡು ಬಂದಿತು. ಲಟಿಗೆ ಮುರಿಯದ ಜನರಲ್ಲಿ ಆರ್ಥ್ರೈಟಿಸ್ ಹೊಂದವರ ಪ್ರಮಾಣ 21% ಇತ್ತು ಮತ್ತು ಲಟಿಗೆ ಮುರಿಯುವರಲ್ಲಿ 18% ಅಷ್ಟು ಜನರಲ್ಲಿ ಇತ್ತು. ಅಷ್ಟೇ ಅಲ್ಲದೆ ಜನರು ತುಂಬಾ ಹೆಚ್ಚು ಲಟಿಗೆ ಮುರಿಯುತ್ತಿದ್ದ ಜೋಡಣೆ ಎಂದರೆ ಅದು ಮಧ್ಯ ಬೆರಳಿನ ಗೇಣು. ಅಲ್ಲದೆ ಹೆಂಗಸರಿಗಿಂತ ಹೆಚ್ಚು ಗಂಡಸರು ಲಟಿಗೆ ಮುರಿಯುತ್ತಾರೆ ಎಂಬುದು ತಿಳಿದು ಬಂದಿತು. ಆದರೆ, ತಿಳಿದು ಬಂದ ಎಲ್ಲದಕ್ಕಿಂತ ಆಶ್ಚರ್ಯಕಾರಿ ಸಂಗತಿ ಎಂದರೆ ಅದು ಬೆರಳುಗಳ ಲಟಿಗೆ ತೆಗೆಯುವುದು ನಿಮ್ಮನ್ನ ಉಂಟಾಗಬಹುದಾದ ಆರ್ಥ್ರೈಟಿಸ್ ಇಂದ ತಡೆಯುತ್ತದೆ ಎಂಬುದು !

Comments are closed.