ಕರಾವಳಿ

ಫೋರ್ಜರಿ ಸಹಿ ಮಾಡಿ ಮೋಸ ಮಾಡಿದ ಆರೋಪಿಗಳಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: ವ್ಯಕ್ತಿಯೋರ್ವರ ನಕಲಿ ಸಹಿ ಬಳಸಿ ಜಮೀನು ಮಾರಾಟ ಮಾಡಿದ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಕೋರ್ಟ್ ತೀರ್ಪು ನೀಡಿದೆ.

ಸುಂದರ ಮರಕಲ ಎನ್ನುವವರು ಈ ದೂರು ನೀಡಿದ್ದರು. ಸುಂದರ್ ಅವರ ಅಕ್ಕನ ಮಗನಾದ ಆರೋಪಿ ಸುಧರ್ಮ ಕುಂದರ, ಚಂದ್ರಕಾಂತ, ಅಂಬಲಪಾಡಿ ರಮೇಶ, ಪೂಜಾರಿ ಸಾನತೋಟ ಇವರುಗಳು ದಿನಾಂಕ 18-12-1998 ರಂದು ಸುಂದರ ಮರಕಲರವರ ನಕಲಿ ಸಹಿಯನ್ನು ಬಳಸಿ ಆರೋಪಿ ಸುಧರ್ಮ ಕುಂದರರವರಿಗೆ, ಪಿರ್ಯಾದಿ ಸುಂದರ ಮರಕಲರವರ ಬಾಬ್ತು ಸರ್ವೆನಂ.170/2,241/11,170/1ಎ,170/14 ಮತ್ತು 170/15 ರಲ್ಲಿ ಇರುವ ಜಮೀನನ್ನು ರೂ.73700/- ಮಾರಾಟ ಮಡಿರುವ ಬಗ್ಗೆ ನಕಲಿ ಕರಾರು ಪತ್ರ ತಯಾರಿಸಿ ಸದರಿ ನಕಲಿ ಕರಾರು ಪತ್ರವನ್ನು ಉಡುಪಿ ಸಬ್ ರಿಜಿಸ್ಟ್ರಾರ್ ರವರ ಕಚೇರಿಯಲ್ಲಿ 2 ಮತ್ತು 3 ನೇ ಆರೋಪಿಗಳಾದ ಚಂದ್ರಕಾಂತ ಮತ್ತು ರಮೇಶ ರವರನ್ನು ಸಾಕ್ಷಿದಾರರನ್ನಾಗಿ ಬಳಸಿಕೊಂಡು ಆ ಮೂಲಕ ಆರೋಪಿ ಸುಧರ್ಮ ಕುಂದರ ಹೆಸರಿಗೆ ನೊಂದಾಯಿಸಿಕೊಂಡಿರುವುದಲ್ಲದೆ ಸದ್ರಿ ದಾಖಲೆ ಪತ್ರವನ್ನು ನೈಜ ಕ್ರಯ ಕರಾರು ಪತ್ರ ಎಂದು ನಂಬಿಸಿ ಆ ಮೂಲಕ ಫಿರ್ಯಾದಿದಾರರ ಜಮೀನನ್ನು ತನ್ನ ಸ್ವಂತಕ್ಕೆ ಉಪಯೊಗಿಸಿ ತನ್ನ ಹೆಸರಿಗೆ ಖಾತೆ ಬದಲಾಯಿಸಿಕೊಂಡು ಫಿರ್ಯಾದಿದಾರ ಸಹಿಯನ್ನು ಪೋರ್ಜರಿ ಮಾಡಿ ಮೋಸ ಮಾಡಿ ಅಪರಾಧವನ್ನು ಎಸಗಿದ್ದಾರೆಂದು ದೂರನ್ನು ನೀಡಿರುತ್ತಾರೆ. ಈ ಪ್ರಕರಣದ ತನಿಖೆಯನ್ನು ಆಗಿನ ಸಬ್ ಇನ್ಸ್‌ಪೆಕ್ಟರ್ ಆದ ಸಿ. ಡಿ. ನಾಗರಾಜ ರವರು ತನಿಖೆ ನಡೆಸಿ ದೊಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣವು ಮಾನ್ಯ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುಧ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ಎಂ.ಎಸ್ ರವರು ಆರೋಪಿಗೆ ಭಾ.ದಂ.ಸಂ ಕಲಂ 423, 465, 468, 471, ಜೊತೆಗೆ 34 ರಡಿ 3 ವರ್ಷ ಸಾದಾ ಸಜೆ ಮತ್ತು ರೂ 5000/- ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಮ್ತಾಜ್ ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.