
ಮಂಗಳೂರು : ಉಡುಪಿ ಪಲಿಮಾರು ಮಠದ ಪರ್ಯಾಯದ ಅಂಗವಾಗಿ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಉದ್ಘಾಟನೆಗೊಂಡಿತು.
ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀ ನಾರಾಯಣ ಆಸ್ರಣ್ಣ ಕೇಂದ್ರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪರ್ಯಾಯ ಮಹೋತ್ಸವಕ್ಕೆ ಸರ್ವರ ಸಹಕಾರವನ್ನು ಯಾಚಿಸಿದರು.
ಕಟೀಲುಅನಂತಆಸ್ರಣ್ಣ ಮಾತನಾಡಿ ಪರ್ಯಾಯ ಶ್ರೀಗಳ ಹುಟ್ಟೂರುಕಟೀಲು ಸಮೀಪದ ಶಿಬರೂರು ಆದ್ದರಿಂದ ಹುಟ್ಟೂರು ನೆಲೆಯಲ್ಲಿ ಭಕಾದಿಗಳು ಈ ನಾಡಹಬ್ಬದ ಯಶಸ್ವಿನಲ್ಲಿ ಪೂರ್ಣರೀತಿಯಲ್ಲಿ ಸಹಕರಿಸಬೇಕೆಂದು ವಿನಂತಿಸಿದರು.
ಶರವು ಕ್ಷೇತ್ರದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶ್ರೀ ರಾಘವೇಂದ್ರ ಶಾಸ್ತ್ರಿ ಶುಭ ಹಾರೈಸಿದರು.
ಈ ಸಂದರ್ಭ ಹರಿಕೃಷ್ಣ ಪುನರೂರು, ಎಸ್. ಪ್ರದೀಪ ಕುಮಾರ ಕಲ್ಕೂರ, ಎಂ. ಬಿ ಪುರಾಣಿಕ್, ಕೆ.ಎಸ್. ಕಲ್ಲೂರಾಯ, ದಿಯಾ ಸಿಸ್ಟಂಸ್ಸ್‌ನ ಡಾ|ರವಿಶಂಕರ್, ಮೊಹನ್ ಮೆಂಡನ್, ಮೊದಲಾದವರು ಉಪಸ್ಥಿತರಿದ್ದರು, ಸುಧಾಕರ್‌ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ಭಕ್ತಾದಿಗಳು ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ಪೂಜಾ ಸಾಮಾಗ್ರಿಗಳು ಹಾಗೂ ಪಾತ್ರೆಗಳನ್ನು ಸಹಿತ ಹೊರೆಕಾಣಿಕೆರೂಪದಲ್ಲಿ ನೀಡಬಹುದಾಗಿದ್ದುಬೆಳಗ್ಗಿನಿಂದ ರಾತ್ರಿಯವರೆಗೂ, ಸಂಗ್ರಹಣಾಕೇಂದ್ರವು ಕಾರ್ಯನಿರ್ವಾಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಶರವುಗಣೇಶ್ ಭಟ್ (9448133027) ಅವರನ್ನು ಸಂಪರ್ಕಿಸ ಬಹುದೆಂದು ಪರ್ಯಾಯ ಮಹೋತ್ಸವ ಸಮಿತಿಯ ಸದಸ್ಯ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು.
Comments are closed.