ಕರಾವಳಿ

ಕೊಲ್ಲೂರಿನಲ್ಲಿ ಡಿ.ಕೆ. ಶಿವಕುಮಾರ್ ಶತ ಚಂಡಿಕಾಯಾಗ; ಜ.8ಕ್ಕೆ ಪೂರ್ಣಾಹುತಿ

Pinterest LinkedIn Tumblr

ಉಡುಪಿ: ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಶತಚಂಡಿಕಾ ಹೋಮದ ಮೊದಲ ದಿನದ ಕಾರ್ಯದಲ್ಲಿ ಧಾರ್ಮಿಕ ವಿಧಾನ ನೆರವೇರಿಸಿದರು.

ಪುರಾಣ ಪ್ರಸಿದ್ಧ ಕೊಲ್ಲೂರು ಕ್ಷೇತ್ರದಲ್ಲಿ ಚಂಡಿಕಾ ಹೋಮಕ್ಕೆ ಮಹತ್ವವಿದೆ. ಸಚಿವ ಡಿಕೆಶಿ ಈ ಬಾರಿ ಮೂರು ದಿನಗಳ ಕಾಲ ನಡೆಸುವ ಈ ಯಾಗ ಶತ ಚಂಡಿಕಾ ಯಾಗವಾಗಿದ್ದು ಜ.8 ಸೋಮವಾರಕ್ಕೆ ಈ ಚಂಡಿಕಾ ಹೋಮದ ಪೂರ್ಣಾಹುತಿ ದೇವಳದಲ್ಲಿ ನಡೆಯಲಿದೆ. ಅರ್ಚಕ ಡಾ. ನರಸಿಂಹ ಅಡಿಗ ನೇತ್ರತ್ವದಲ್ಲಿ ಆರಂಭಗೊಂಡ ಶತಚಂಡಿಕಾಯಾಗದಲ್ಲಿ ಶನಿವಾರ ಬೆಳಿಗ್ಗೆ ಡಿಕೆ ಶಿವಕುಮಾರ್ ಪಾಲ್ಘೊಂಡರು.

ಮಾಮೂಲಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಹೋಮ ಇದಾಗಿದ್ದು ಯಾವುದೇ ರಾಜಕೀಯ ಉದ್ದೇಶ ಇಲ್ಲವೆನ್ನಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೂ ಪ್ರತಿಕ್ರಿಯಿಸಿದ ಸಚಿವರು ಈ ಹಿಂದೆ ಶತ ಚಂಡಿಕಾಯಾಗ ಮಾಡುವ ಸಂಕಲ್ಪ ಹೊಂದಿದ್ದೆ. ಅಂತೆಯೇ ಈಗ ಕಾಲ ಕೂಡಿ ಬಂದಿದ್ದು ಸೇವೆ ನೆರವೇರಿಸುತ್ತಿರುವೆ ಎಂದರು.

ಸಚಿವರ ಆಗಮನದ ವೇಳೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಸದಸ್ಯ ರಮೇಶ್ ಗಾಣಿಗ, ಉದ್ಯಮಿ ಯು.ಬಿ. ಶೆಟ್ಟಿ, ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೆಂಟ್ ರಾಜೇಶ್ ಕೆ.ಸಿ., ಮಾಜಿ ಶಾಸಕ ಯು.ಆರ್. ಸಭಾಪತಿ, ಕೆಡಿಪಿ ಸದಸ್ಯ ರಾಜು ಪೂಜಾರಿ, ಕೊಳ್ಕೆಬೈಲು ಕಿಶನ್ ಹೆಗ್ಡೆ ಇದ್ದರು.

Comments are closed.