ಕುಂದಾಪುರ: ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ (ಎಸಿ) ಶಿಲ್ಪಾ ನಾಗ್ ಅವರು ಹಾವೇರಿ ಜಿ.ಪಂ ಸಿಇಒ ಆಗಿ ಭಡ್ತಿ ಹೊಂದಿ ವರ್ಗಾವಣೆ ಹೊಂದಿದ್ದಾರೆ. ಶಿಲ್ಪಾ ನಾಗ್ ಅವರು 2014 ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು 2016ರಲ್ಲಿ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕುವಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದರು. ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಜೊತೆಗೆ ತೆರಳಿದ ಶಿಲ್ಪಾ ನಾಗ್ ಅವರ ಮೇಲೆ ಎ.2 ರಂದು ರಾತ್ರಿ ಕಂಡ್ಲೂರು ಭಾಗದಲ್ಲಿ ಹಲ್ಲೆ ನಡೆದಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
Comments are closed.