ಕುಂದಾಪುರ: ಯಾವುದೇ ಸಭೆ , ಸಮಾರಂಭವಿರಲಿ…ಫೋಟೋ ಕ್ಯಾಮೆರಾ ಫೋಸು ನೀಡದೇ, ಪ್ರಚಾರದಿಂದ ಹಿಂದಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಫೋಟೋಗೆ ಸೆರೆಸಿಕ್ಕಿದ್ದರು.

ಇದಕ್ಕೆ ಸಾಕ್ಷಿಯಾಗಿದ್ದು ಕುಂದಾಪುರದ ಕೋಟೇಶ್ವರ ಹಳೆಅಳಿವೆ ಕಡಲ ಕಿನಾರೆ. ಅಲ್ಲಿ ನಡೆಯುತ್ತಿರುವ ‘ಊರ್ಮನಿ ಹಬ್ಬ’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ವೇಳೆ ವಿಶೇಷ ಆಕರ್ಷಣೆಯಾಗಿದ್ದ ಲ್ಯಾಂಬಿ ಆಟೋ ರಿಕ್ಷಾ(ಹಳೆ ಮಾಡೆಲ್ ಆಟೋ) ಹತ್ತಿದ್ದರು. ಅಲ್ಲದೇ ಸಮುದ್ರ ತೀರದಲ್ಲಿ ಚಲಿಸುವ ಬೈಕಿನಲ್ಲಿ ಜಾಲಿ ರೈಡ್ ಮಾಡಿದರು. ಈ ಸಂದರ್ಭ ಕ್ಲಿಕ್ಕಿಸಿದ ಫೋಟೋಗಳಿದು.
(ವರದಿ- ಯೋಗೀಶ್ ಕುಂಭಾಸಿ)
Comments are closed.