ಕರಾವಳಿ

ಮನಪಾ ಕಾರ್ಯಾಚರಣೆ : ಅನಧಿಕೃತ ಬ್ಯಾನರ್, ಹೋರ್ಡಿಂಗ್, ಕಟೌಟ್ ತೆರವು

Pinterest LinkedIn Tumblr

ಮಂಗಳೂರು, ಡಿಸೆಂಬರ್.29: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ನಗರದ ಸುತ್ತಮುತ್ತ ರಸ್ತೆಗಳ ಇಕ್ಕೆಲಗಳಲ್ಲಿ ಹಾಕಲಾದ ಬ್ಯಾನರ್, ಹೋರ್ಡಿಂಗ್, ಕಟೌಟ್ ಇತ್ಯಾದಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವರ್ಗವು ಗುರುವಾರ ನಡೆಸಿದ ಕಾರ್ಯಾಚರಣೆ ಮೂಲಕ ತೆರವುಗೊಳಿಸಿತು.

ನಗರದ ಸೌಂದರ್ಯಕ್ಕೆ ಕುಂದುಂಟಾಗುವ ರೀತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಅಭಿನಂದನೆ ಕೋರಿರುವ, ವಿವಿಧ ಸಂಘಟನೆಗಳ ಕಾರ್ಯಕ್ರಮಗಳಿಗೆ ಶುಭ ಕೋರಿ ಹಾಕಲಾದ ಬ್ಯಾನರ್, ಕಟೌಟ್ಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಮನಪಾಕ್ಕೆ ದೂರು ಸಲ್ಲಿಸಿದ್ದರು.

ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ಅವುಗಳನ್ನು ಕಾರ್ಯಾಚರಣೆಗೊಳಿಸುವುದು ಕೂಡ ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಅದರಂತೆ ಗುರುವಾರ ಬೆಳಗ್ಗೆ ಆರಂಭಿಸಲಾದ ಕಾರ್ಯಾಚರಣೆಯು ಮಧ್ಯಾಹ್ನದವರೆಗೂ ಮುಂದುವರಿಯಿತು.

ಮನಪಾ ಆಯುಕ್ತ ಮುಹಮ್ಮದ್ ನಝೀರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರ ಅವರ ತಂಡ ಕಾರ್ಯಾಚರಣೆ ನಡೆಸಿ ನಗರದ ಹಂಪನಕಟ್ಟೆ, ಪುರಭವನ, ಲೇಡಿಹಿಲ್, ಲಾಲ್ಬಾಗ್ ಮತ್ತಿತರ ಕಡೆ ವಿವಿಧ ಪಕ್ಷದ ಮತ್ತು ಸಂಘಟನೆಗಳ ಬ್ಯಾನರ್, ಕಟೌಟ್ಗಳನ್ನು ತೆರವುಗೊಳಿಸಿದರು. ಬ್ಯಾನರ್, ಹೋರ್ಡಿಂಗ್, ಕಟೌಟ್ ಗಳನ್ನು ತೆರವುಗೊಳಿಸುವ ಸಂದರ್ಭ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯಾಚರಣೆ ವೇಳೆ ಪೊಲೀಸರು ರಕ್ಷಣೆ ನೀಡಿದರು.

Comments are closed.