ಕರಾವಳಿ

ಮಂಗಳೂರು : ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.15: ರಾಜ್ಯ ಸರಕಾರ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು (ಸಿವಿಲ್) ವರ್ಗಾವಣೆಗೊಳಿಸಿ ಗುರುವಾರ ಆದೇಶಿಸಿದ್ದು, ರಾಜ್ಯದ 121 ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ದ.ಕ.ಜಿಲ್ಲೆಯ ಇನ್‌ಸ್ಪೆಕ್ಟರ್‌ಗಳು ವರ್ಗಾವಣೆಗೊಂಡ ಪಟ್ಟಿಯಲ್ಲಿದ್ದಾರೆ.

ಡಿಸಿಐಬಿ ಇನ್ಸ್ಪೆಕ್ಟರ್ ಆಗಿದ್ದ ಅಮಾನುಲ್ಲಾ ಮಂಗಳೂರು ನಗರ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ, ನಗರ ಎಸ್.ಬಿ.ಯಲ್ಲಿದ್ದ ಶಿವಪ್ರಕಾಶ್ ಎಚ್. ನಗರ ಪೂರ್ವ ಸಂಚಾರ ಪೊಲೀಸ್ ಠಾಣೆಗೆ, ಬಂದರು ಠಾಣೆಯಲ್ಲಿದ್ದ ಶಾಂತಾರಾಮ ಸಿಸಿಬಿಗೆ, ಸುರತ್ಕಲ್ ಠಾಣೆಯಲ್ಲಿದ್ದ ಚೆಲುವರಾಜು ಉ.ಕ. ಜಿಲ್ಲೆಯ ಹೊನ್ನಾವರ ವೃತ್ತಕ್ಕೆ, ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿದ್ದ ಮೋಹನ್ ಕೊಟ್ಟಾರಿ ನಗರ ಎಸ್.ಬಿ.ಗೆ, ಸಿಸಿಬಿಯಲ್ಲಿದ್ದ ಸುನಿಲ್ ವೈ. ನಾಯಕ್ ದ.ಕ. ಡಿಸಿಐಬಿಗೆ, ಮಂಗಳೂರು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿದ್ದ ಸುರೇಶ್ ಕುಮಾರ್ ದ.ಕ. ಡಿ.ಎಸ್.ಬಿ.ಗೆ, ಭಟ್ಕಳ ವೃತ್ತದಲ್ಲಿದ್ದ ಕುಮಾರಸ್ವಾಮಿ ಮಂಗಳೂರು ಡಿ.ಸಿ.ಆರ್.ಇ.ಗೆ, ಭಟ್ಕಳ ವೃತ್ತದ ಗಣೇಶ್ ಕೆ.ಎಲ್. ಮಂಗಳೂರು ಡಿ.ಸಿ.ಆರ್.ಇ.ಗೆ, ಸೋಮವಾರಪೇಟೆ ವೃತ್ತದ ಪರಶಿವಮೂರ್ತಿ ಎಸ್. ಬಜ್ಪೆ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

Comments are closed.