ಕರಾವಳಿ

ಸಾಸ್ತಾನ ಭಾಗದಲ್ಲಿ ತಂಬಾಕು ಅಂಗಡಿಗಳಿಗೆ ದಾಳಿ:16 ಪ್ರಕರಣ, 2100ರೂ ದಂಡ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋಪ್ಟಾ 2003 ಕಾಯ್ದೆಯನ್ನು ಅನುಷ್ಠಾಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ಉಡುಪಿ ತಾಲೂಕಿನ ಸಾಸ್ತಾನ ಪ್ರದೇಶಗಳಲ್ಲಿ ವಿವಿಧ ತಂಬಾಕು ಮಾರಾಟದ ಅಂಗಡಿಗಳು ಹೋಟೇಲ್‌ಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಸೆಕ್ಷನ್ 4,6 (ಎ) ಮತ್ತು 6(ಬಿ) ಅಡಿಯಲ್ಲಿ  16 ಪ್ರಕರಣ ದಾಖಲಿಸಿ ರೂ. 2100 ದಂಡ ವಸೂಲಿ ಮಾಡಲಾಗಿದೆ. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು.

ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ. ವಾಸುದೇವ, ಉಡುಪಿ ತಾಲೂಕು ಆರೋಗ್ಯಾಧಿಕಾರಿಯಾದ ಡಾ. ನಾಗರತ್ನ, ಆಹಾರ ಸುರಕ್ಷತಾ ಅಧಿಕಾರಿಗಳು ಶ್ರೀ ವೆಂಕಟೇಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀ ಕೃಷ್ಣಪ್ಪ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀ ಜೀವನ್, ಕೋಟ ಪೋಲೀಸ್ ಠಾಣೆಯ ಎ.ಎಸ್.ಐ ಸುಧಾ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಜಿಲ್ಲಾ ಸಲಹೆಗಾರರಾದ ಶ್ರೀಮತಿ ಮಮತಾ ನಾಯಕ್, ಎನ್.ಟಿ.ಸಿ.ಪಿ. ಸಮಾಜ ಕಾರ್ಯಕರ್ತೆಯಾದ ಶೈಲಾ ಎಸ್. ಎಮ್., ಮತ್ತು ವಾಹನ ಚಾಲಕರಾದ ಸತೀಶ್ ಮತ್ತು ಬಾಲಕೃಷ್ಣ ಉಪಸ್ಥಿತರಿದ್ದರು.

Comments are closed.