ಕರಾವಳಿ

ಆರೋಗ್ಯ ಸಂಬಂಧಿತ ವಿಷಯಗಳಲ್ಲೂ ಬೇಕಿಂಗ್ ಸೋಡಾದ ಕಾರ್ಯ ಉತ್ತಮ

Pinterest LinkedIn Tumblr

ಪ್ರತಿ ಮನೆಯ ಅಡುಗೆ ಕೋಣೆಯಲ್ಲಿರುವ ಬೇಕಿಂಗ್ ಸೋಡಾವು ಹಲವಾರು ರೀತಿಯಲ್ಲಿ ಪ್ರಯೋಜನಕಾರಿ.ಕೇವಲ ಅಡುಗೆಗೆ ಮಾತ್ರ ಸೀಮಿತವಾದ, ಬೇಕಿಂಗ್ ಸೋಡಾದ ಉಪಯೋಗಗಳ ಬಗ್ಗೆ ಹೆಚ್ಚಿನ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಆರೋಗ್ಯ ಸಂಬಂಧಿತ ವಿಷಯಗಳಲ್ಲೂ ಬೇಕಿಂಗ್ ಸೋಡಾಕ್ಕೆ ಅದರದ್ದೇ ಆದ ಸ್ಥಾನವಿದೆ. ಅದೇನೆಂದು ತಿಳಿಯೋಣ ಬನ್ನಿ.

೧.ಎದೆಯುರಿ, ಅಜೀರ್ಣ ಹಾಗೂ ಅಲ್ಸರಿನ ನಿವಾರಣೆ
‘ಉದರ ರೋಗಗಳಿಗೆ ಉತ್ತಮ ಪರಿಹಾರಿ’ ಎಂದು ಕರೆಯಿಸಿಕೊಳ್ಳುವ ಬೇಕಿಂಗ್ ಸೋಡಾವು, ತನ್ನ ಕ್ಷಾರೀಯಗುಣಗಳಿಂದ, ಹೊಟ್ಟೆಯಲ್ಲಿರುವ ಅಧಿಕ ಆಮ್ಲವನ್ನು ತಟಸ್ಥಗೊಳಿಸುವುದು. ಇದರಿಂದ, ಆಸಿಡಿನಿಂದುಂಟಾಗುವ ಉದರ ಸಂಬಂಧಿತ ಸಮಸ್ಯೆಗಳಿಗೆ ಶಮನವಾಗುವುದು.

೨.ಆಯಾಸ ಪರಿಹಾರಿ ಹಾಗೂ ಪಾದ ರಕ್ಷಕ
ಅಗಲ ಬಾಯಿಯ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಅದಕ್ಕೆ ಬೇಕಿಂಗ್ ಸೋಡವನ್ನು ಸೇರಿಸಿ ಪಾದಗಳನ್ನು ಮುಳುಗಿಸಿಡುವುದರಿಂದ, ಪಾದಕ್ಕೆ ಆರಾಮ ಸಿಗುವುದು. ರಕ್ತಪರಿಚಲನೆಯನ್ನು ಅಧಿಕಗೊಳಿಸುವಂತಹ ಸ್ವಭಾವದಿಂದಾಗಿ, ದಿನದ ಕೆಲಸಗಳಿಂದ ನಿಶ್ಯಕ್ತ ಕಾಲುಗಳಿಗೆ ಪುನರ್ಜೀವನ ಲಭಿಸುವುದು. ಪಾದದ ಡೆಡ್ ಸ್ಕಿನ್ ನಿವಾರಿಸಲು ಉಪಯೋಗಿಸಲ್ಪಡುವ ಬೇಕಿಂಗ್ ಸೋಡಾವು ಉತ್ತಮ ಎಕ್ಸ್ಫೋಲಿಯೇಟರ್(ಪದರ ಪದರವಾಗಿ ಚರ್ಮದ ಸುಲಿತ) ಕೂಡ ಹೌದು

೩.ದಂತ ಸಮಸ್ಯೆ ಪರಿಹಾರ
ದಂತದ ಶುಚಿತ್ವದಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುವ ಬೇಕಿಂಗ್ ಸೋಡಾವು ಧವಳಕಾರಕ ( ವೈಟೆನಿಂಗ್ ಏಜೆಂಟ್ )ಮಾತ್ರವಲ್ಲದೆ ಕಲೆಗಳ ನಿವಾರಕವಾಗಿಯೂ ಕಾರ್ಯನಿರ್ವಹಿಸುವುದು. ಆದರೆ ಸ್ವಲ್ಪ ಕೊರೊಸಿವ್(ಕೊರೆಯುವ) ಗುಣವನ್ನು ಹೊಂದಿರುವ ಬೇಕಿಂಗ್ ಸೋಡಾದ ಅತಿಯಾದ ಬಳಕೆಯೂ ಹಲ್ಲಿನ ಹೊರಪದರ ಎನಾಮೆಲಿನ ಸವೆತಕ್ಕೆ ಕಾರಣವಾಗುವುದು.

೪.ಕಪ್ಪುಸುತ್ತಿರುವುದರ ನಿರ್ಮೂಲನೆ
ಚರ್ಮದ ಸೂಥಿಂಗ್ ಏಜೆಂಟ್(ಶೀತಲಕಾರಕ) ಮತ್ತು ರಿಲ್ಯಾಕ್ಸಿಂಗ್ ಏಜೆಂಟ್ (ಆರಾಮದಾಯಕ )ಆಗಿ ವರ್ತಿಸುವ ಬೇಕಿಂಗ್ ಸೋಡವನ್ನು ಸೂರ್ಯಾಘಾತವಾದ ಭಾಗಗಳಲ್ಲಿ ಲೇಪಿಸುವುದರಿಂದ ಚರ್ಮವು ತಂಪಾಗುವುದಲ್ಲದೆ, ಸನ್ ಬರ್ನಿಂದಲೂ ಪಾರಾಗುವುದು. ಸನ್ ಬರ್ನ್ ಗೊಳಗಾದ ತಕ್ಷಣವೇ ಬೇಕಿಂಗ್ ಸೋಡಾದ ಲೇಪನದಿಂದ ಚರ್ಮವು ಕಪ್ಪಾಗುವುದನ್ನು ತಡೆಗಟ್ಟಬಹುದು.

Comments are closed.