ಕರಾವಳಿ

ಕಣ್ಣಿನ ಬಳಿ ಗೀಜು (ಪಿಸುರು, ಪಿಚ್ಚು) ‘Tear Phil ಯಾಕೆ ಇರುತ್ತೆ ಗೋತ್ತೆ… ?

Pinterest LinkedIn Tumblr

ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವರಲ್ಲಿ ಗೀಜು ಗಟ್ಟಿಯಾಗಿದ್ದರೆ ಇನ್ನೂ ಕೆಲವರಲ್ಲಿ ದ್ರವದಂತೆ ಇರುತ್ತದೆ. ಇನ್ನೂ ಕೆಲವರಲ್ಲಿ ಅಂಟಿನಂತೆ ಬದಲಾಗಿರುತ್ತದೆ. ಆದರೆ ಹೇಗೇ ಇದ್ದರೂ ಗೀಜು ಯಾವ ವಿಧದಲ್ಲಿ ತಯಾರಾಗುತ್ತದೋ, ಅದು ಯಾಕೆ ಬರುತ್ತದೆ ಅಂತ ನಿಮಗೆ ಗೊತ್ತಾ? ಗೊತ್ತಿಲ್ಲ ಅಲ್ಲವೇ! ಆದರೆ ಕೆಳಗೆ ಕೊಟ್ಟ ವಿವರಗಳನ್ನು ಓದಿ, ನಿಮಗೇ ಗೊತ್ತಾಗುತ್ತದೆ!

ಕಣ್ಣಿನ ನಡುವೆ ಇರುವ ಕಪ್ಪಗಿನ ಭಾಗ ಮ್ಯೂಕಸ್, ಆಯಿಲ್‌ನಂತಹ ಪದಾರ್ಥಗಳಿಂದ ತಯಾರಾದ ಒಂದು ಪೊರೆಯಂತೆ ಇರುತ್ತದೆ. ಇದನ್ನೇ ’ಟಿಯರ್ ಫಿಲಿಂ’ ಅಂತಾರೆ. ಇದು ಯಾವಾಗಲೂ ಕಣ್ಣಿನೊಳಗಿನ ಆಯಿಲ್‌ನಂತಹ ಪದಾರ್ಥವನ್ನು ವಿಸರ್ಜಿಸುತ್ತಿರುತ್ತದೆ. ಇದರಿಂದ ಕಣ್ಣಿನ ರೆಪ್ಪೆಗಳು ಬಡಿದಾಗ ಆ ಆಯಿಲ್‌ನಂತಹ ದ್ರವ ಕಣ್ಣೆಲ್ಲಾ ಪಸರಿಸಿ ಕಣ್ಣಿಗೆ ರಕ್ಷಣಾ ಕವಚದಂತೆ ಇರುತ್ತದೆ. ಇದರಿಂದ ಕಣ್ಣು ಸುರಕ್ಷಿತವಾಗಿರುತ್ತದೆ. ಆದರೆ ಆ ದ್ರವಗಳು ಕಣ್ಣಿನಲ್ಲಿ ವಿಸ್ತರಿಸಿದಾಗಲೆಲ್ಲಾ ಕಣ್ಣಿನಲ್ಲಿನ ಧೂಳಿನಂತಹವು ದೂರ ತಳ್ಳಲ್ಪಡುತ್ತವೆ. ಈ ರೀತಿಯಾಗಿ ಕಣ್ಣಿನಲ್ಲಿ ತುಂಬಿಕೊಂಡ ಧೂಳು, ಮ್ಯೂಕಸ್, ಡೆಡ್ ಸ್ಕಿನ್ ಸೆಲ್ಸ್, ಆಯಿಲ್, ಬ್ಯಾಕ್ಟೀರಿಯಾ ಎಲ್ಲಾ ಬೆರೆತು ಗೀಜಾಗಿ ಬದಲಾಗಿ ಕಣ್ಣಿನ ಕೊನೆಗೆ ಸೇರುತ್ತದೆ. ಆದರೆ ಈ ಗೀಜು ಹಗಲು ಹೊತ್ತು ಸಹ ಏರ್ಪಡುತ್ತದೆ. ಆದರೆ ಅದು ಅಷ್ಟಾಗಿ ನಮಗೆ ಕಾಣಿಸಲ್ಲ. ರಾತ್ರಿ ಹೊತ್ತು ಗೀಜನ್ನು ಹೆಚ್ಚಾಗಿ ನೋಡಬಹುದು. ಇನ್ನು ಬೆಳಗ್ಗೆಯಾದರೆ ಆ ಗೀಜು ಕಣ್ಣಿನ ಕೊನೆಗಳ ಬಳಿ ಹೆಚ್ಚಾಗಿ ಕಾಣಿಸುತ್ತದೆ. ರಾತ್ರಿ ಹೊತ್ತು ಹೆಚ್ಚಿನ ಸಮಯ ಕಣ್ಣು ಮುಚ್ಚಿಯೇ ಇರುತ್ತೇವೆ ಆದಕಾರಣ ಗೀಜೆಲ್ಲಾ ಕಣ್ಣಿನ ಕೊನೆಗೆ ಬಂದು ಸೇರಿ ಹೆಚ್ಚಾಗಿ ಸಂಗ್ರಹವಾಗುತ್ತದೆ. ಇದರಿಂದ ಬೆಳಗ್ಗೆ ಕಣ್ಣಿನ ಬಳಿ ನಮಗೆ ಗೀಜು ಹೆಚ್ಚಾಗಿ ಕಾಣಿಸುತ್ತದೆ.

ಸಾಮಾನ್ಯವಾಗಿ ನಿದ್ದೆ ಮಾಡುವುದರಿಂದ ಬರುವ ಗೀಜಿನಿಂದ ನಮಗೆ ಯಾವುದೇ ಅನಾರೋಗ್ಯ ಉಂಟಾಗಲ್ಲ. ಆದರೆ ಆ ರೀತಿ ಅಲ್ಲದೆ ಇತರೆ ಸಂದರ್ಭಗಳಲ್ಲಿ ಗೀಜು ಹೆಚ್ಚಾಗಿ ಬರುತ್ತಿದ್ದರೆ ಅದಕ್ಕೆ ಕಾರಣ ಏನೋ ಇರುತ್ತದೆ. ಅಂದರೆ ನಾವು ಯಾವುದೋ ಒಂದು ಅನಾರೋಗ್ಯದಿಂದ ನರಳುತ್ತಿದ್ದೇವೆ ಎಂದರ್ಥ. ಮೇಲೆ ಹೇಳಿದ ವಿಧದಲ್ಲಿ ಟಿಯರ್ ಫಿಲಂ ಹೆಚ್ಚಾಗಿ ದ್ರವಗಳನ್ನು ಸ್ರವಿಸುವುದು, ಅಥವಾ ಟಿಯರ್ ಫಿಲಂಗೆ ಏನಾದರೂ ಅಡ್ಡಿಯಾಗುವುದು, ಕಣ್ಣಿಗೆ ಬ್ಯಾಕ್ಟೀರಿಯಾ ಸೋಂಕು ತಗುವಂತಹವುಗಳಿಂದ ಗೀಜು ಹೆಚ್ಚಾಗಿ ಬರುತ್ತದೆ.

ಬ್ಯಾಕ್ಟೀರಿಯಾ ಇನ್‌ಫೆಕ್ಷನ್ ಆದರೆ ಕಣ್ಣು ಹಳದಿಯಾಗಿ ಬದಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಣ್ಣು ಕೆಂಪಗೆ ಬದಲಾಗುತ್ತದೆ. ಇದು ಕೂಡ ಒಂದು ವಿಧವಾದ ಬ್ಯಾಕ್ಟೀರಿಯಾ ಸೋಂಕು ಕಾರಣದಿಂದ ಸಂಭವಿಸುತ್ತದೆ. ಈ ರೀತಿ ಸೋಂಕು ಬಂದರೆ ಕಣ್ಣಿನ ಸುತ್ತಲೂ ಇರುವ ರೆಪ್ಪೆಗಳು ಉಬ್ಬಿಕೊಂಡು ಕೆಲವು ಸಂದರ್ಭಗಳಲ್ಲಿ ಕಣ್ಣು ಕೂಡ ಸಂಪೂರ್ಣವಾಗಿ ತೆಗೆಯದ ಪರಿಸ್ಥಿತಿ ಬರುತ್ತದೆ. ಆದರೆ ಮೇಲೆ ತಿಳಿಸಿದ ಸಂದರ್ಭಗಳಲ್ಲಷ್ಟೇ ಅಲ್ಲದೆ, ಕಣ್ಣನ್ನು ಹೆಚ್ಚಾಗಿ ಉಜ್ಜಿಕೊಂಡಾಗ ಸಹ ಗೀಜು ಹೆಚ್ಚಾಗಿ ಬರುತ್ತದೆ. ಆದರೆ ಗೀಜು ಹೆಚ್ಚಾಗಿ ಬರುತ್ತಿದೆ ಅಂತ ಅನ್ನಿಸಿದರೆ ಸೂಕ್ತ ಚಿಕಿತ್ಸೆ ಪಡೆದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Comments are closed.