ಕರಾವಳಿ

ದ.ಕ. ಜಿಲ್ಲೆಯ 4 ಸಾಧಕ ಮಕ್ಕಳಿಗೆ ರಾಷ್ಟ್ರ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ; ನಾಳೆ ಪ್ರದಾನ

Pinterest LinkedIn Tumblr

ಮ0ಗಳೂರು ನವೆಂಬರ್ 13:ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ದಕ್ಷಿಣ ಕನ್ನಡ ಜಿಲ್ಲೆಯ 4 ಮಂದಿ ಮಕ್ಕಳಿಗೆ ಈ ಸಾಲಿನಲ್ಲಿ ರಾಷ್ಟ್ರ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ಇವರನ್ನು ನವೆಂಬರ್ 14, ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವ್ಯದು.

ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿ: ಬಂಟ್ವಾಳ ತಾಲೂಕಿನ ಕೆದಿಲ ಮುರ್ಗಾಜೆಯ ಸ್ವಸ್ತಿಕ್ ಪದ್ಮ (ವಿಜ್ಞಾನದಲ್ಲಿ ಸಂಶೋಧನೆ) ಎಂಬ ವಿದ್ಯಾರ್ಥಿಯು ವಿಜ್ಞಾನ ಕ್ಷೇತ್ರದಲ್ಲಿ (ವೈಜ್ಞಾನಿಕ ಸಂಶೋಧನೆ)ಯಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ 2017ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನವೆಂಬರ್ 14 ರಂದು ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುವ ಮಕ್ಕಳ ದಿನಾಚರಣೆಯಂದು ರಾಷ್ಟ್ರಪತಿಗಳಿಂದ ರೂ.10,000/- ನಗದು ಹಾಗೂ ರಜತ ಪದಕದೊಂದಿಗೆ ಸನ್ಮಾನಿಸಲ್ಪಡುತ್ತಿದ್ದಾನೆ. ಈತ ಅನೇಕ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾನೆ.

ರಾಜ್ಯ ಮಟ್ಟದಲ್ಲಿ ಸನ್ಮಾನಿಸಲ್ಪಡುತ್ತಿರುವ ವಿದ್ಯಾರ್ಥಿನಿ: ಸುರತ್ಕಲ್ ಸುಭಾಷಿತ ನಗರದ ಎಂ. ಅದ್ವಿಕಾ ಶೆಟ್ಟಿ (ಸಾಂಸ್ಕೃತಿಕ ಕ್ಷೇತ್ರ) ಎಂಬ ವಿದ್ಯಾರ್ಥಿನಿಯ (ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ 2017 ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು, ನವೆಂಬರ್ 14 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಂದು ಸನ್ಮಾನಿಸಲ್ಪಡುತ್ತಿದ್ದಾಳೆ. ಈಕೆ ಅನೇಕ ರಾಷ್ಟ್ರ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾಳೆ.

ಶೌರ್ಯ ಪ್ರಶಸ್ತಿಗೆ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ 2 ವಿದ್ಯಾರ್ಥಿಗಳು: ಸಜೀಪ ಮೂಡಾ ಕುಡೂರು ಮನೆಯ ವೈಶಾಖ್,(ಶೌರ್ಯ ಪ್ರಶಸ್ತಿ), ಈತನು ಅಪಾಯಕಾರಿ ಹೆಬ್ಬಾವಿನ ಬಾಯಿಗೆ ಸಿಲುಕಿಕೊಂಡಿದ್ದು, ಬುದ್ಧಿ ಚಾತುರ್ಯದಿಂದ ಹಾವಿನ ಬಾಯಿಯಿಂದ ತನ್ನನ್ನು ಹಾಗೂ ತನ್ನ ತಂಗಿಯನ್ನು ರಕ್ಷಿಸಿದ್ದಾನೆ.

ಅದೇ ರೀತಿ ಪುತ್ತೂರು ತಾ. ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್. (ಶೌರ್ಯ ಪ್ರಶಸ್ತಿ), ಈತನು ವಿಷದ ಹಾವಿನಿಂದ ಕಡಿತಕ್ಕೊಳಗಾದ ತನ್ನ ತಂಗಿಯನ್ನು ತನ್ನ ಬುದ್ಧಿ ಚಾತುರ್ಯದಿಂದ ಶಾಲೆಯಲ್ಲಿ ಕಲಿತ ಪ್ರಥಮ ಚಿಕಿತ್ಸೆ ವಿಧಾನದ ಮೂಲಕ ಬಾಯಿಯಲ್ಲಿ ವಿಷವನ್ನು ಹೀರಿ ತನ್ನ ತಂಗಿಯ ಪ್ರಾಣವನ್ನು ರಕ್ಷಿಸಿದ್ದಾನೆ.

ಈ ಇಬ್ಬರ ಶೌರ್ಯವನ್ನು ಪರಿಗಣಿಸಿ 2017-18 ನೇ ಸಾಲಿನ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 14 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಂದು ಸನ್ಮಾನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Comments are closed.