ಕರಾವಳಿ

ವೀಸಾ ಅವಧಿ ಮುಗಿದು ಬಂಧನಕ್ಕೊಳಗಾಗಿದ್ದ ನೈಜೀರಿಯನ್ ಪ್ರಜೆ ಮರಳಿ ತನ್ನ ದೇಶಕ್ಕೆ

Pinterest LinkedIn Tumblr

ಉಡುಪಿ: ವೀಸಾ ಅವಧಿ ಮುಗಿದರೂ ಭಾರತದಲ್ಲೇ ಉಳಿದಿರುವ ಆರೋಪದಡಿ ನೈಜೀರಿಯನ್ ಪ್ರಜೆಯನ್ನು ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ದಂಡ ವಿಧಿಸಿ, ಆತನನ್ನು ಮರಳಿ ದೇಶಕ್ಕೆ ಕಳಿಸಲು ಆದೇಶ ನೀಡಿತ್ತು.

ನೈಜಿರಿಯಾ ದೇಶದ ಪ್ರಜೆ ಮಣಿಪಾಲದಲ್ಲಿ ವಾಸ್ತವ್ಯವಿದ್ದ ರಾಜಿ ರಕೀಬ್ ಬಬತುಂಡೆ ಸದ್ಯ ತನ್ನ ದೇಶಕ್ಕೆ ಮರಳಿದ್ದಾನೆ.

ಮಣಿಪಾಲ ವಿಶ್ಚವಿದ್ಯಾನಿಲಯದಲ್ಲಿ ಬ್ಯಾಚುಲರ್ ಆಫ್ ಓಕುಪೇಶನ್ ತೆರೆಪಿ ಹಾಗೂ ಮಾಸ್ಟರ್ ಆಫ್ ಓಕುಪೇಶನ್ ತೆರೆಪಿ ವ್ಯಾಸಂಗ ಮುಗಿಸಿದ್ದು, ಆತನ ವಿದೇಶಿಯ ಪಾಸ್ಪೋರ್ಟ್ ಅವಧಿಯು 30/12/2020 ರವರೆಗೆ ವಾಯಿದೆ ಇದ್ದು ವೀಸಾ ಅವಧಿಯು 31/01/2017 ರಂದು ಮುಕ್ತಾಯವಾಗಿದ್ದು, ಅನಂತರ ತನ್ನ ವೀಸಾವನ್ನು ವಿದೇಶಿಯರ ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಣಾಯಿಸಿಕೊಳ್ಳದೆ ಮತ್ತು ವಾಸವಿಸ್ತರಣೆ ಕುರಿತು ಅರ್ಜಿ ಸಲ್ಲಿಸದೆ ಭಾರತದಲ್ಲಿ ಅನಧಿಕೃತವಾಗಿ ವಾಸವಾಗಿದ್ದ. ರಾಜಿ ರಕೀಬ್ ಮಣಿಪಾಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸಬ್ಜೆಕ್ಟ್ ನಲ್ಲಿ ಬ್ಯಾಕ್ ಇದೆಯೆಂದು ಕಾಲೇಜಿನಲ್ಲಿ ಸಮಯ ಕಳೆಯುತ್ತಿದ್ದ.

ಈತನನ್ನು ದೇಶದಿಂದ ಕಳುಹಿಸುವ ಬಗ್ಗೆ ನ.2 ರಂದು ಮುಂಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ, ಆತನ ಮಾತೃ ದೇಶಕ್ಕೆ ಕಳುಹಿಸಿ ಕೊಡಲಾಗಿದೆ.

Comments are closed.