ಕರಾವಳಿ

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರಿಂದ ಐವರ ಸೆರೆ

Pinterest LinkedIn Tumblr

ಬಂಟ್ವಾಳ, ಅಕ್ಟೋಬರ್.27: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ಮಾಣಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ.

ತೊಕ್ಕೊಟ್ಟು ನಿವಾಸಿ ಅಶ್ರಫ್ ಸಂಶೀರ್ (27), ಫರಂಗಿಪೇಟೆ ಅಮ್ಮೆಮ್ಮಾರ್ ನಿವಾಸಿ ಝೈನುದ್ದೀನ್ (21), ತೊಕ್ಕೊಟ್ಟು ಉಳ್ಳಾಲ ಮಾರ್ಗತಳಿ ನಿವಾಸಿ ಮುಹಮ್ಮದ್ ಇಕ್ಬಾಲ್ (27), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಉಬೈದುಲ್ಲಾ (32), ಸಕಲೇಶಪುರ ಅರೇಹಳ್ಳಿ ಫರ್ಝಾನಾ ಯಾನೆ ಫರ್ಝಾನಾ ಸುಮೈಯ್ಯ (26) ಬಂಧಿತ ಆರೋಪಿಗಳು.

ಬಂಧಿತರಿಂದ 6 ಮೊಬೈಲ್, 2 ಕಾರು, 8 ಗ್ರಾಂ ಚಿನ್ನ, 7.5 ಲಕ್ಷ ರೂ. ನಗದು ಹಾಗೂ ಪಾಸ್ ಪೋರ್ಟ್ ಅನ್ನು ವಶಕ್ಕೆಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.