ಕರಾವಳಿ

ಅಂಚೆ ಕಚೇರಿ ಎದುರು ಕೇಂದ್ರ ಸರಕಾರದ ವಿರುದ್ದ ಉಡುಪಿ ಯುವ ಕಾಂಗ್ರೆಸ್ ಪ್ರೊಟೆಸ್ಟ್

Pinterest LinkedIn Tumblr

ಉಡುಪಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ದೇಶದ ಯುವಕರಿಗೆ ಮೋಸ ಮಾಡಿದೆ ಎಂದು ಆರೋಪಿಸಿ ಉಡುಪಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕೇಂದ್ರದದ ವಿರುದ್ದ ಪ್ರತಿಭಟನೆ ನಡೆಸಿತು.

ಉಡುಪಿಯ ಪ್ರದಾನ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಉದ್ಯೋಗ ಸೃಷ್ಟಿಸದದೇ ದೇಶದ ಯುವಕರನ್ನು ವಂಚಿಸುತ್ತಿರುವ ಕೇಂದ್ರದ ವಿರುದ್ದ ಘೋಷಣೆ ಕೂಗಲಾಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಮೇಶ್ ಬೋರೆಗೌಡ ವರ್ಷಕ್ಕೆ ಎರಡು ಕೋಟಿ ಉದೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಕನಿಷ್ಟ ೧೦ ಶೇಕಡಾ ಉದ್ಯೋಗ ಸೃಷ್ಟಿಸದೇ ದೇಶದ ಯುವಕರನ್ನು ವಂಚಿಸುತ್ತಿದೆ. ಈ ಹಿಂದೆ ಯುಪಿಎ ಸರಕರವನ್ನು ಟೀಕಿಸುತ್ತಿದ್ದ ಬಿಜೆಪಿಗರು ಇದೀಗ ಯಾಕೆ ಮೌನಿಯಾಗಿದ್ದಾರೆ? ಇದೇ ರೀತಿಯಾದಲ್ಲಿ ದೇಶದ ಯುವಕರೇ ಮೋದಿಗೆ ತಕ್ಕ ಪಾಠ ಕಲಿಸುತ್ತಾರೆ. ಆದಷ್ಟು ಬೇಗ ಎಚ್ಚೆತ್ತುಕೊಳ್ಳಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ವಿಗ್ನೇಶ್ ಕಿಣಿ, ನಾಗೇಶ್ ಉದ್ಯಾವರ, ಕೀರ್ತಿ ಶೆಟ್ಟಿ, ಮುಂತದಾವರು ಉಪಸ್ಥಿತರಿದ್ದರು.

Comments are closed.