ಕರಾವಳಿ

ಉಡುಪಿಯ ಚಂದು ಮೈದಾನದಲ್ಲಿ 11ನೇ ನಿರ್ಗಮನ ಪಥ ಸಂಚಲನ

Pinterest LinkedIn Tumblr

ಉಡುಪಿ: ಜನರಿಗೆ ಪೊಲೀಸರಿಂದ ತೊಂದರೆ ಆಗುತ್ತಿದೆ. ಖಾಕಿ ತೊಟ್ಟ ತಕ್ಷಣ ನಮ್ಮ ವರ್ತನೆಗಳು ಬದಲಾಗುತ್ತಿದ್ದು ಮೊದಲು ನಮ್ಮಲ್ಲಿರುವ ದರ್ಪ,ಅಹಂ ಗಳು ತೊಡೆದು ಜನಸಮಾನ್ಯರಿಗೆ ನೆರವು, ರಕ್ಷಣೆ ನೀಡುವ ಈ ಮೂಲಕ ಜನಸ್ನೇಹಿ ಪೊಲೀಸ್ ಆಗುವತ್ತ ಹೆಜ್ಜೆ ಇಡಬೇಕು ಎಂದು ಪಶ್ಚಿಮವಲಯದ ಐಜಿಪಿ ಹೇಮಂತ್ ನಿಂಬಾಲ್ಕರ್ ತಿಳಿಸಿದ್ದಾರೆ.

ಉಡುಪಿಯ ಚಂದು ಮೈದಾನದಲ್ಲಿ 11ನೇ ತಂದಡ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳ ಗೌರವ ವಂದನೆ ಸ್ವೀಕರಿಸಿ, ಆಕರ್ಷಕ ಕವಾಯತು ವೀಕ್ಷಿಸಿ ಮಾತನಾಡಿದರು.

ಠಾಣೆಗೆ ಬರುವ ದೂರುದಾರರಿಗೆ ಆತ್ಮೀಯವಾಗಿ ಮಾತನಾಡಿ, ಅವರಿಗೆ ನೀರು ನೀಡಿ ಆಗ ಪೊಲೀಸರ ಬಗೆಗೆ ಜನರ ಭಾವನೆಯೇ ಬದಲಾಗಲಿದೆ. ನಾವು ಖಾಕಿ ತೊಟ್ಟ ತಕ್ಷಣ ಭಾಷೆ, ಭಾವನೆಗಳು ಬದಲಾಗುತ್ತಿದ್ದು ಇದು ತಪ್ಪು. ನಮಗೆ ಲಾಠಿ, ಕೋವಿ ನೀಡಿರುವುದು ದುಷ್ಟರ ಶಿಕ್ಷೆಗಾಗಿ ಮಾತ್ರ. ಇದು ನಿರಪರಾಧಿಗಳ, ಅಸಾಹಯಕರ, ದಲಿತರ, ರೈತರ ಶೋಷಣೆಗೆ ಅಲ್ಲ, ನಮ್ಮನ್ನು ನಾವು ಬದಲಾಗುವ ಮೂಲಕ ಜನಸ್ನೇಹಿ ಪೊಲೀಸ್ ಯೋಜನೆ ಸಾಕಾರಗೊಳಿಸುವ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದಲ್ಲಿ ಗೆದ್ದ ಸ್ಪರ್ದಾರ್ದಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟೀಲ್, ಎ ಎಸ್ಪಿ ಕುಮಾರಚಂದ್ರ, ಮುಂತಾದವರು ಉಪಸ್ಥಿತರಿದ್ದರು.

Comments are closed.