ಕರಾವಳಿ

ವಿದ್ಯಾರ್ಥಿಗಳನ್ನು ಗ್ರಾಹಕರಂತೆ ಕಾಣುತ್ತಿರುವ ಶಿಕ್ಷಣ ಸಂಸ್ಥೆಗಳು :ಪ್ರೋ.ಅರ್‍ಜುಲ ರಾಮಚಂದ್ರ ರೆಡ್ಡಿ ವಿಷಾದ

Pinterest LinkedIn Tumblr

ಮಂಗಳೂರು ಅಕ್ಟೋಬರ್ 24: ವಿಶ್ವವಿದ್ಯಾನಿಲಯಗಳು ಜ್ಞಾನ ಭರಿತ ವಿದ್ಯಾರ್ಥಿಗಳನ್ನು ಹೊರಹೊಮ್ಮಿಸಬೇಕಾಗಿದೆ. ಕೌಶಲ್ಯ ಭರಿತ ವಿದ್ಯಾರ್ಥಿಗಳನ್ನಲ್ಲ, ಕೌಶಲ್ಯಕ್ಕಿಂತ ಜ್ಞಾನ ಭರಿತ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ಸಾಮಾನ್ಯ ಜ್ಞಾನದ ಬಗ್ಗೆ ವಿದ್ಯಾರ್ಥಿಗಳ ಯೋಚನೆಗಳು ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಗ್ರಾಹಕರ ರೂಪದಲ್ಲಿ ಕಾಣುತ್ತಿವೆ. ಎಂದು ಯೋಗಿ ವೆಮುನ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೋ.ಅರ್‍ಜುಲ ರಾಮಚಂದ್ರ ರೆಡ್ಡಿ ವಿಷಾದ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಉನ್ನತ ಶಿಕ್ಷಣದಲ್ಲಿ ಮಾನವ ಸಂಪನ್ಮೂಲದ ಬಳಕೆ’ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ್ತನಾಡುತ್ತ “ಶಿಕ್ಷಣ ವ್ಯವಸ್ಥೆಯು ದುಬಾರಿಯಾಗುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಜನೆಗೆ ಸಾಕಷ್ಟು ಆಯ್ಕೆಗಳಿಗೆ ಅವಕಾಶ ನೀಡಿರುವುದು ಮತ್ತು ಭಿನ್ನವಾದ ಯೋಚನೆಯೊಂದಿಗೆ ನಡೆಯುತ್ತಿದೆ.

ಮಾನವ ಸಂಪನ್ಮೂಲ ಬಳಕೆ ಎಂದರೆ ಸರೆಯಾದ ಸಂಖ್ಯೆಯಲ್ಲಿನ ಜನ, ಸರಿಯಾದ ವ್ಯಕ್ತಿಗಳು, ಸರಿಯಾದ ಸ್ಥಳದಲ್ಲಿ ಮತ್ತು ಸರಿ ಯಾದ ಸಮಯದಲ್ಲಿ ಬಳಸಿಕೊಳ್ಳುವುದಾಗಿದೆ.ಸಿಬ್ಬಂದಿಗಳನ್ನು ಆಯ್ಕೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ಅಭ್ಯರ್ಥಿಗಳನ್ನು ಕೈ ಬಿಡುವುದೇ ಒಂದು ಮುಖ್ಯ ಪ್ರಕ್ರಿಯೆಯಾಗಿದೆ. ಆಯ್ಕೆಯಲ್ಲಿ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮುಖ್ಯ. ಒಟ್ಟು 800 ವಿಶ್ವವಿದ್ಯಾನಿಲಯಗಳಲ್ಲಿ 73% ದಷ್ಟು ಸಿಬ್ಬಂದಿಗಳ ಕೊರತೆ ಇದೆ” ಎಂದು ಪ್ರೊ. ರೆಡ್ಡಿ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮತ್ತು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷ ಪ್ರೊ. ಎಸ್.ಎನ್.ಹೆಗಡೆ ಮಾತನಾಡುತ್ತ ‘ನಮ್ಮಗೆ ಎಲ್ಲವನ್ನು ನಿರ್ವಹಣೆ ಮಾಡಬಲ್ಲ ಮತ್ತು ತಾಂತ್ರಿಕವಾಗಿ ಕೌಶಲ್ಯ ಭರಿತ ಜ್ಞಾನವುಳ್ಳ ಸಿಬ್ಬಂದಿಗಳ ಅವಶ್ಯಕತೆ ಇರುತ್ತದೆ.ಒಂದು ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಪ್ರೋತ್ಸಾಹಿಸುವುದು ಆದ್ಯ ಕರ್ತವ್ಯಗಳಾಗಿದೆ’ ಎಂದು ಹೇಳಿದರು.

ನಾಯಕತ್ವ ಎನ್ನುವುದು ಬಹಳ ಪ್ರಾಮುಖ್ಯವಾದದ್ದು. ಕೆಲಸ ನಿರ್ವಹಣೆ ಮತ್ತು ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಉತ್ತಮ ಪ್ರತಿಭಾವಂತರನ್ನು ಗುರುತಿಸುವುದರ ಜೊತೆಗೆ ಮುಂದಿನ ಪೀಳಿಗೆ ಸಿಬ್ಬಂದಿಗಳನ್ನು ತಯಾರು ಮಾಡುವುದು ಆದ್ಯ ಕರ್ತವ್ಯ ಆಗಿದೆ. ಉತ್ತಮ ಗುಣಮಟ್ಟದ ಶಿಕ್ಷಣವು ಶಿಕ್ಷಕರಿಂದ ಮಾತ್ರ ಸಾಧ್ಯ. ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ..ಕೆ ಭೈರಪ್ಪ ನುಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ.ಎಮ್.ಲೊಕೇಶ್, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆಯ ಕಾರ್ಯದರ್ಶಿ ಪ್ರೋ.ಅರ್.ಎನ್. ಶ್ರೀನಿವಾಸ್ ಗೌಡ, ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಪ್ರೊ.ಜಯರಾಜ್ ಅಮಿನ್, ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎ.ಎಂ. ಖಾನ್ ಉಪಸ್ಥಿತರಿದ್ದರು.

Comments are closed.