ಕರಾವಳಿ

ಆಧುನಿಕ ತಂತ್ರಜ್ಞಾನವಿರುವ ಲಾಂಡ್ರಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ರೂ ಮೌಲ್ಯದ ಸ್ವತ್ತು ಬೆಂಕಿಗಾಹುತಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 19: ನಗರದ ಬಿಜೈಯ ಲಾಂಡ್ರಿ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಸ್ವತ್ತು ಹಾನಿಗೊಂಡಿರುವುದಾಗಿ ತಿಳಿದುಬಂದಿದೆ.

ಬಿಜೈ ಕೆ.ಎಸ್.ಆರ್.ಟಿ.ಸಿ ಸಮೀಪದ ಬಿಜೈ ರಸ್ತೆಯಲ್ಲಿರುವ ಪ್ರಾಪರ್ಟಿ ಸಂಸ್ಥೆಯ ವಸತಿ ಸಮುಚ್ಚಯದಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ರೆನ್ವಿಕ್ ಎಂಬವರ ಮೈ ಆಂಗರ್ ಲಾಂಡ್ರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬೆಂಕಿ ಅವಘಡದಿಂದ ಅಪಾರ ಸೊತ್ತು ಬೆಂಕಿಗಾಹುತಿಯಾಗಿದೆ.

ಆಧುನಿಕ ತಂತ್ರಜ್ಞಾನವಿರುವ ಈ ಲಾಂಡ್ರಿಯಲ್ಲಿ ದುಬಾರಿ ಮೌಲ್ಯದ ಸೀರೆಗಳು ಸೇರಿದಂತೆ ಇತರ ಸೊತ್ತುಗಳು ಬೆಂಕಿಗಾಹುತಿಯಾಗಿದ್ದು, ಇದರಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿರ ಬೇಕೆಂದು ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.