ಕರಾವಳಿ

ಜನರ ತೆರಿಗೆ ಹಣದ ಚಿನ್ನದ ಬಿಸ್ಕೆಟ್ ಬಿಜೆಪಿ ಶಾಸಕರು ಸ್ವೀಕರಿಸಬಾರದು: ಆರ್. ಅಶೋಕ್

Pinterest LinkedIn Tumblr

ಉಡುಪಿ: ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಭೆಯಲ್ಲಿ ಭಾಗವಹಿಸಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿಯನ್ನೆ ನಡೆಸಿದರು.

ರಾಜ್ಯದ ಬೊಕ್ಕಸ ಲೂಟಿಯಾಗಿದೆ. ಜನ ರಾಜಕಾರಣಿಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಶಾಸಕರಿಗೆ ಚಿನ್ನದ ಬಿಸ್ಕೆಟ್ ಕೊಡೋದು ಸರಿಯಲ್ಲ. ಜನರ ತೆರಿಗೆ ಹಣದ ಬಿಸ್ಕೆಟ್ ಎಂಬ ಅಪಕೀರ್ತಿ ಬೇಡ. ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕರು ಇದನ್ನು ಪಡೆದುಕೊಳ್ಳಬಾರದು ಎಂದರು. ರಾಜ್ಯದ ಹೆಡ್ ಮಾಸ್ಟರೇ ಸರಿಯಿಲ್ಲ, ಸಿದ್ದರಾಮಯ್ಯ ನಿದ್ದೆಯಲ್ಲಿದ್ದಾರೆ.

ಸಿದ್ದರಾಮಯ್ಯ ಕೆಲಸ ಮಾಡೋಕೆ ಬಂದವರಲ್ಲ. ಜಾತಿಗಳ ನಡುವೆ ಬೆಂಕಿ ಹಚ್ಚಕ್ಕೆ ಬಂದಿದ್ದಾರೆ, ಸಿಎಂ ಜೇಬಲ್ಲಿ ಪೆಟ್ರೋಲ್- ಬೆಂಕಿಪೊಟ್ಟಣ ಇಟ್ಕೊಂಡು ಓಡಾಡ್ತಾರೆ. ರಾಹುಲ್ ಗಾಂಧಿಗೆ ಪಟ್ಟಾಭಿಷೇಕ ಆಗ್ತಾಯಿದೆ, ರಾಹುಲ್ ಗಾಂಧಿ ಅಂದ್ರೆ ಯಾರೂ ಅಂತನೇ ಜನರಿಗೆ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಲೇವಡಿ ಮಾಡಿದರು.

Comments are closed.