ಕರಾವಳಿ

ಟೋಲ್ ಸಂಗ್ರಹದ ವಿರುದ್ಧ ಉಡುಪಿ ಬಂದ್; ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ

Pinterest LinkedIn Tumblr

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಾಮಗಾರಿ ಅರೆಬರೆಯಾಗಿದ್ದರೂ ಕೂಡ ಸಾಸ್ತಾನದಲ್ಲಿ ಟೋಲ್ ವಸುಲಾತಿ ಮಾಡುತ್ತಿರುವ ಕ್ರಮಕ್ಕೆ ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ಹೆದ್ದಾರಿ ಜಾಗೃತಿ ಸಮಿತಿ ಕರೆಕೊಟ್ಟಿದ್ದ ಉಡುಪಿ ಜಿಲ್ಲಾ ಬಂದ್‌ಗೆ ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆನಿಂದಲೇ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ನಿಂತಿತ್ತು, ಉಳಿದಂತೆ ಅಟೋ ರಿಕ್ಷಾ, ಕಾರುಗಳು ಹಾಗೂ ಇತರೇ ಎಲ್ಲಾ ವಾಹನಗಳ ಸಂಚಾರ ನಿತ್ಯದಂತಿತ್ತು. ಗ್ರಾಮೀಣ ಪ್ರದೇಶಗಳಿಗೆ ತೆರಳುವ ಸರಕಾರಿ ಬಸ್ಸುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಕುಂದಾಪುರದಿಂದ ಮಂಗಳೂರಿಗೆ ತೆರಳುವ ಸರಕಾರಿ ಬಸ್ಸು ಹೊರತುಪಡಿಸಿದರೇ ಉಳಿದೆಲ್ಲಾ ಸರಕಾರಿ ಬಸ್ಸುಗಳು ಜನಸೇವೆಗೆ ಲಭ್ಯವಿದ್ದವು. ಉಳಿದಂತೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು ಅಲ್ಲಲ್ಲಿ ಕೆಲವು ವಾಣಿಜ್ಯ ಮಳಿಗೆಗಳು ಹಾಗೂ ಹೋಟೆಲ್ ಮೊದಲಾದ ಅಂಗಡಿಗಳು ಮುಚ್ಚಿದ್ದವು.

ಬೇರೆ ಕಡೆಯ ಟೋಲ್ ಗಳಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯತಿ ನೀಡುವಂತೆ ಉಡುಪಿಯ ಎರಡು ಟೋಲ್‌ಗಳಲ್ಲಿಯೂ ಕೂಡ ಸ್ಥಳೀಯ ಕೆ.ಎ. ೨೦ ವಾಹನಗಳಿಗೆ ಟೋಲ್ ಶುಲ್ಕ ವಿನಾಯತಿ ನೀಡಬೇಕು, ಹೆದ್ದಾರಿ ಕಾಮಗಾರಿಗಳು ಸಂಪೂರ್ಣ ಮುಗಿದ ಮೇಲೆ ಟೋಲ್ ಸಂಗ್ರಹ ಪ್ರಕ್ರಿಯೆ ಆರಂಭಿಸಬೇಕು, ಈಗಾಗಲೇ ಕಾಮಗಾರಿಗಳು ಬಹಳಷ್ಟು ಬಾಕಿಯಿದ್ದು ಅದನ್ನು ಸಂಪೂರ್ಣಗೊಳಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಜಿಲ್ಲಾಧಿಕಾರಿಗಳು ಕೂಡ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಗಿ ೧೪೪ ಸೆಕ್ಷನ್ ಹಾಕುವ ಮೂಲಕ ಪ್ರತಿಭಟನಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ. ಟೋಲ್ ಸಂಗ್ರಹ ಮಾಡುವ ಗುತ್ತಿಗೆ ಕಂಪೆನಿಯು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯಾವುದೇ ಕೆಲಸ ಮಾಡಿಲ್ಲ. ಟೋಲ್ ಸಂಗ್ರಹ ಆರಂಭಿಸಿದ ದಿನದಿಂದ ಬಕಿಯಿರುವ ಕಾಮಗಾರಿಯನ್ನು ಮಾಡಿಲ್ಲ. ಇದನ್ನೆಲ್ಲವನ್ನೂ ನೋಡಿದರೇ ಗುತ್ತಿಗೆ ಕಂಪೆನಿಗೆ ಕೆಲಸ ಮುಗಿಸುವ ಆಲೋಚನೆಯ ಬದಲು ಕೇವಲ ಟೋಲ್ ಸಂಗ್ರಹದ ಗುರಿಯೇ ಇದ್ದಂತೆ ಕಾಣುತ್ತಿದೆ ಎಂದು ಆಕ್ರೋಷವೂ ವ್ಯಕ್ತವಾಯಿತು.

Comments are closed.