ಕರಾವಳಿ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಕೈಬಿಟ್ಟು ಕೋಲಾರಕ್ಕೆ ಪರ್ಯಾಯ ನೀರಿನ ಯೋಜನೆ : ಎಚ್.ಡಿ.ಕುಮಾರ ಸ್ವಾಮಿ

Pinterest LinkedIn Tumblr

ಮಂಗಳೂರು,ಫೆಬ್ರವರಿ.13: ರಾಜ್ಯದಲ್ಲಿ ಕಾಂಗ್ರೆಸ್ -ಬಿಜೆಪಿ ಅಧಿಕಾರದಿಂದ ಬೇಸತ್ತ ಜನ ಪ್ರಾದೇಶಿಕ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ.ಇದರಿಂದ ಮುಂದಿನ ಚುನಾವಣೆ ಜೆಡಿಎಸ್‌ಗೆ ಪೂರಕವಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ 131 ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.

ರವಿವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಅವರು ಸುದ್ಧಿಗಾರರ ಜೊತೆ ಮಾತನಾಡಿದರು.ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಕಲೆಕ್ಷನ್ ಸಂಸ್ಕೃತಿಯನ್ನು ಕೊನೆಗೊಳಿಸಲಿದೆ.ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರಿನ ಬಂದರು ಅಭಿವೃದ್ಧಿಗೆ ಜೆಡಿಎಸ್ ಯೋಜನೆ ರೂಪಿಸಲಿದೆ ಎಂದು ಸ್ವಾಮಿ ತಿಳಿಸಿದರು.

ಎತ್ತಿನಹೊಳೆ ಯೋಜನೆ ವಿರೊಧಿಸಲು ಕಾಂಗ್ರೆಸ್ -ಬಿಜೆಪಿ ಮುಖಂಡರಿಗೆ ನೈತಿಕ ಹಕ್ಕಿಲ್ಲ, ಎತ್ತಿನ ಹೊಳೆ ಯೋಜನೆಯ ಬಗ್ಗೆ ಶಿಲಾನ್ಯಾಸ ನಡೆಸಿ ಹಣ ಬಿಡುಗಡೆ ಮಾಡಿ ಒಂದು ವರುಷದೊಳಗೆ ಕೋಲಾರಕ್ಕೆ ನೀರು ನೀಡುತ್ತೇವೆ ಎಂದು ಆಗಿನ ಮುಖ್ಯ ಮಂತ್ರಿ ಸದಾನಂದ ಗೌಡ ಹಾಗೂ ಯೋಜನೆಯ ಮುಖ್ಯ ರೂವಾರಿ ವೀರಪ್ಪ ಮೊಯ್ಲಿಯವರು ಹೇಳಿದ್ದರು, ಇದೊಂದು ಹಣ ಹೊಡೆಯಲು ಮಾಡಿದ ಯೋಜನೆ.ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಕುಮಾರ ಸ್ವಾಮಿ ತಿಳಿಸಿದರು.

ಕೋಲಾರದ ಜನರಿಗೆ ನೀರು ನೀಡಲು ಜೆಡಿಎಸ್ ಪರ್ಯಾಯ ಯೋಜನೆಯನ್ನು ಹೊಂದಿದೆ.ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ಕೈ ಗೆತ್ತಿಕೊಳ್ಳುತ್ತೇವೆ.ನಮ್ಮ ನೆರೆಯ ಆಂಧ್ರಪ್ರದೇಶ ತೆಲುಗು-ಗಂಗಾ ಯೋಜನೆಯ ಮೂಲಕ ತಮ್ಮ ನೀರಿನ ಬವಣೆ ನೀಗಿಸಿ ಕೊಂಡಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು.

ಜೆಡಿಎಸ್‌ನ ಮುಖಂಡರಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಎಂ.ಬಿ ಸದಾಶಿವ, ಮಹ್ಮದ್ ಕುಂಜ್ಞಿ, ಅಜೀಜ್ ಪರ್ತಿಪಾಡಿ, ಆಶೀತ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.