ಕರಾವಳಿ

ಟೋಲ್ ಪ್ರಾಬ್ಲಂ: ಸೋಮವಾರ (ಫೆ.13) ಉಡುಪಿ ಬಂದ್; ರಾ.ಹೆದ್ದಾರಿಯಲ್ಲಿ 144 ಸೆಕ್ಷನ್

Pinterest LinkedIn Tumblr

ಉಡುಪಿ: ಜನರ ವಿರೋಧದ ನಡುವೆಯೂ ಉಡುಪಿಯ ಹೆಜಮಾಡಿ ಹಾಗೂ ಸಾಸ್ತಾನದ ಗುಂಡ್ಮಿ ಟೋಲ್ ಗೇಟಿನಲ್ಲಿ ಮೂರ್ನಾಲ್ಕು ದಿನಗಳಿಂದ ಟೋಲ್ ಸಂಗ್ರಹ ಮಾಡುತ್ತಿದ್ದು ಈ ಬಗ್ಗೆ ಸ್ಥಳೀಯರು ಪ್ರತಿಭಟನೆ ನಡೆಸಿದರೂ ಕೂಡ ಸಂಬಂದಪಟ್ಟವರು ಕ್ಯಾರೇ ಅನ್ನದ ಕಾರಣ ನಾಳೆ (ಫೆ.13 ಸೋಮವಾರ) ಉಡುಪಿ ಜಿಲ್ಲಾ ಬಂದ್ ಕರೆ ನೀಡಲಾಗಿದೆ.

ಪ್ರತಿಭಟನಾಕಾರರ ಬೇಡಿಕೆಗಳಾದ ಹೆದ್ದಾರಿಯಲ್ಲಿ ಮೂಲಭೂತ ಸೌಕರ್ಯ, ಹಾಗೂ KA20 ವಾಹನಗಳಿಗೆ ವಿನಾಯತಿ ನೀಡದೆ ಇದ್ದ ಬಗ್ಗೆ ಈ ಬಂದ್ ಕರೆಯಲಾಗಿದೆ. ಜಿಲ್ಲೆಯ ಸರ್ವಪಕ್ಷಗಳು ಎಲ್ಲಾ ಸಂಘ ಸಂಸ್ಥೆಗಳು. ಬಸ್, ಲಾರಿ, ಹಾಗೂ ಗೂಡ್ಸ್ ವಾಹನ ಹಾಗೂ ಅಟೊರಿಕ್ಷಾ ಚಾಲಕ ಮಾಲಕರ ಸಂಘಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಇನ್ನು ಈ ಬಂದ್ ಬಹುತೇಕ ಯಶಸ್ವಿಯಾಗುವ ಸಾಧ್ಯತೆಯಿದ್ದು ಸೋಮವಾರ ಖಾಸಗಿ ಬಸ್ಸು ರಸ್ತೆಗಿಳಿಯುವುದು ಕಷ್ಟಕರ. ಅಲ್ಲದೇ ಲಾರಿ, ರಿಕ್ಷಾ ಹಾಗು ಎಲ್ಲಾ ರೀತಿಯ ವಾಹನಗಳು ಬಂದ್ ಆಗುವ ಸಾದ್ಯತೆಯಿದೆ. ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಮುಚ್ಚುವ ಸಾಧ್ಯತೆಗಳಿದೆ.

144 ಸೆಕ್ಷನ್…..
ಇನ್ನು ಬಂದ್ ನಡೆಸುವ ವೇಳೆ ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರುಕತಾ ಕ್ರಮವಾಗಿ ಜಿಲ್ಲೆಯಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆಯಲ್ಲದೇ 12.02.2017ರ ರಾತ್ರಿ 12.00 ಘಂಟೆಯಿಂದ ದಿನಾಂಕ 13.02.20.17 ರ ಮಧ್ಯರಾತ್ರಿ ವರೆಗೆ ಉಡುಪಿ ತಾಲೂಕಿನಾದ್ಯಂತ , ಉಡುಪಿ ನಗರ ಸಭೆ ವ್ಯಾಪ್ತಿ ಹಾಗೂ ತೆಕ್ಕಟ್ಟೆಯಿಂದ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲ 2 ಕಿ.ಮಿ ವ್ಯಾಪ್ತಿಯ ತನಕ ಸಿಆರ್ ಪಿ ಸಿ 144 ಕಲಂ ಜಾರಿ ಮಾಡಿ ಆದೇಶ ನೀಡಲಾಗಿದೆ.

Comments are closed.