ಕರಾವಳಿ

ಕ್ಯಾನ್ಸರ್ ಜಾಗೃತಿಗಾಗಿ ‘ಕ್ಯಾನ್ಸರ್ಥಾನ್-17 : ಮಂಗಳೂರು ಹಾಫ್ ಮ್ಯಾರಥಾನ್

Pinterest LinkedIn Tumblr

ಮಂಗಳೂರು, ಫೆಬ್ರವರಿ.12: ಯೆನೆಪೊಯ ವಿಶ್ವವಿದ್ಯಾನಿಲಯದ ಡೆಂಟಲ್ ಕಾಲೇಜಿನ 25ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಕ್ಯಾನ್ಸರ್ ರೋಗದ ವಿರುದ್ಧ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕ್ಯಾನ್ಸರ್ಥಾನ್-17 ಮಂಗಳೂರು ಹಾಫ್ ಮ್ಯಾರಥಾನ್’ಗೆ ರವಿವಾರ ಬೆಳಿಗ್ಗೆ 5 ಗಂಟೆಗೆ ನಗರದ ಫೋರಮ್ ಫಿಝಾ ಮಾಲ್ ಎದುರು ಚಾಲನೆ ನೀಡಲಾಯಿತು.

ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಈ ಮ್ಯಾರಥಾನ್ನಲ್ಲಿ 7,000 ಜನ ಪಾಲ್ಗೊಂಡಿದ್ದರು. ಕ್ಯಾನ್ಸರ್ಥಾನ್-17 ಮಂಗಳೂರು ಹಾಫ್ ಮ್ಯಾರಥಾನ್ನ ಬ್ರಾಂಡ್ ಅಂಬಾಸಿಡರ್ ಆಗಿ ಅಂತಾರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳಾದ ವಂದನಾ ಶಾನ್ಭಾಗ್, ಸಹನಾಕುಮಾರಿ ಪಾಲ್ಗೊಂಡಿದ್ದರು. ‘ಭರವಸೆಗಾಗಿ ಓಟ, ಆರೋಗ್ಯ ಸುಧಾರಣೆಗೆ ಓಟ, ಕ್ಯಾನ್ಸರ್ನಿಂದ ಬಳಸಲುತ್ತಿರುವವರಿಗೆ ಓಟ’ ಎನ್ನುವ ಧ್ಯೇಯವಾಕ್ಯದೊಂದಿಗೆ 5 ಕಿ.ಮೀ., 10 ಕಿ.ಮೀ., 21 ಕಿ.ಮೀ. ಮ್ಯಾರಥಾನ್ನ್ನು ಆಯೋಜಿಸಲಾಗಿತ್ತು.

ಸಮಾರೋಪ :ಮ್ಯಾರಥಾನ್ನ ವಿಜೇತರಿಗೆ ಪ್ರಶಸ್ತಿ, ಪದಕ ವಿತರಣೆ

ಬೆಳಿಗ್ಗೆ ಸುಮಾರು 8.30ಕ್ಕೆ ಮ್ಯಾರಥಾನ್ ಮತ್ತೆ ನಗರದ ಫೋರಮ್ ಫಿಝಾ ಮಾಲ್ ಆವರಣದಲ್ಲಿ ಸಮಾಪನಗೊಂಡಿತು. ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮ್ಯಾರಥಾನ್ನ ವಿಜೇತರಿಗೆ ಪ್ರಶಸ್ತಿ, ಪದಕ ವಿತರಿಸಲಾಯಿತು.

ಸಮಾರಂಭದಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ವೈ.ಅಬ್ದುಲ್ಲಾ ಕುಂಞಿ, ಉಪ ಕುಲಪತಿ ಡಾ.ಎಂ.ವಿಜಯಕುಮಾರ್, ಕ್ಯಾನ್ಸರ್ ಮ್ಯಾರಥಾನ್-17ರ ಅಧ್ಯಕ್ಷ ಡಾ.ಹಸನ್ ಸರ್ಫ್ರಾಝ್, ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ವಂದನಾ ಶಾನ್ಭಾಗ್, ಸಹನಾಕುಮಾರಿ, ಯು.ಟಿ.ಇಫ್ತಿಹಾದ್, ರಿಜಿಸ್ಟ್ರಾರ್ ಜಿ.ಶ್ರೀಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದ್ಯಮಿ ಬಿ.ಎಂ.ಫಾರೂಕ್, ಅತ್ತಾವರ ಹುಸೈನ್, ಫರ್ಹಾದ್ ಯೆನೆಪೊಯ, ಶ್ಯಾಮ್ ಭಟ್, ಸಂಚಾಲಕ ಶ್ರೀಪತಿ ರಾವ್ ಮೊದಲಾದವರು ಉಪಸ್ಥಿತರಿದ್ದರು.

21 ಕಿ.ಮೀ. ಮ್ಯಾರಥಾನ್ 18-21ರ ಮಹಿಳೆಯರ ವಿಭಾಗದಲ್ಲಿ ಜ್ಯೋತಿ(ಪ್ರಥಮ), ಸುಪ್ರಿಯಾ ಮುಂಬೈ(ದ್ವಿತೀಯ), ಸೌಮ್ಯಾ(ತೃತೀಯ), ಅರ್ಚನಾ(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು. 21 ಕಿ.ಮೀ. ಮ್ಯಾರಥಾನ್ನ ಪುರುಷರ ವಿಭಾಗದಲ್ಲಿ ಚಾರ್ಲ್ಸ್ ಕೀನ್ಯಾ(ಪ್ರಥಮ), ಫಿಲಿಪ್ ಕೀನ್ಯಾ(ದ್ವೀತೀಯ), ಅಡ್ವಿನ್ ಕೀನ್ಯಾ(ತೃತೀಯ) ಹಾಗೂ ಕಾಂತಿಲಾಲ್(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು.

10 ಕಿ.ಮೀ. ಮ್ಯಾರಥಾನ್ನ ಮಹಿಳಾ(40+) ವಿಭಾಗದಲ್ಲಿ ರಿಶು ಸಿಂಗ್(ಪ್ರಥಮ), ಸುಪ್ರಿತಾ(ದ್ವಿತೀಯ), ಪವಿತ್ರಾ(ತೃತೀಯ), ತೇಜಸ್ವಿನಿ(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು. 10 ಕಿ.ಮೀ.ನ ಪುರುಷರ ವಿಭಾಗದಲ್ಲಿ ಅನಂತ್ ಟಿ.ಎಂ.(ಪ್ರಥಮ), ರಾಬಿನ್(ದ್ವಿತೀಯ), ತಿರುಪತಿ ರಾವ್(ತೃತೀಯ), ಅಭಿಷೇಕ್(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು.

10 ಕಿ.ಮೀ.ನ ಹಿರಿಯ ಮಹಿಳಾ ವಿಭಾಗದಲ್ಲಿ ಜ್ಯೋತಿ ಹರೀಶ್ ರಾವ್(ಪ್ರಥಮ), ರಾಜಶ್ರೀ ನಾಯರ್(ದ್ವೀತಿಯ) ಪ್ರಶಸ್ತಿಗೆ ಭಾಜನರಾದರು. ಹಿರಿಯ ಪುರುಷರ ವಿಭಾಗದಲ್ಲಿ ಸಾಜಿ ರಾಜು(ಪ್ರಥಮ), ನಿಕಿಲ್ ರಾಣೆ(ದ್ವಿತೀಯ) ಸ್ಥಾನ ಪಡೆದರು.

Comments are closed.