ಕರಾವಳಿ

ಜನರ ವಿರೋಧದ ನಡುವೆ ಟೋಲ್ ಸಂಗ್ರಹ ಆರಂಭ; ನಾಳೆ ಪ್ರತಿಭಟನೆ; ಸಾಸ್ತಾನದಲ್ಲಿ 144 ಸೆಕ್ಷನ್

Pinterest LinkedIn Tumblr

ಉಡುಪಿ: ಜನರ ವಿರೋಧ ಹಾಗೂ ಆಕ್ರೋಶಗಳ ನಡುವೆಯೂ ಉಡುಪಿಯ ಸಾಸ್ತಾನ ಟೋಲ್ ಗೇಟ್ ಆರಂಭಗೊಂಡಿದ್ದು ಶುಕ್ರವಾರದಿಂದ ಟೋಳ್ ಸಂಗ್ರಹ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸೇರಿದಂತೆ ಜನರು ಆಕ್ರೋಷಗೊಂಡಿದ್ದು ಪೊಲೀಸ್ ಬಂದೋಬಸ್ತಿನಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ.

ನಾಳೆ ಪ್ರತಿಭಟನೆ…
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನೇತ್ರತ್ವದಲ್ಲಿ ಶಾಸಕರು, ಜನಪ್ರತಿನಿಧಿಗಳು, ಟೋಲ್ ವಿರೋಧಿ ಹೋರಾಟಗಾರರು ಹಾಗೂ ಸಂಘಟನೆಗಳ ಮುಖಂಡರ ಒಗ್ಗೂಡುವಿಕೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಹಗೂ ಟೋಲ್ ಅಧಿಕಾರಿಗಳ ಸಭೆ ಇತ್ತೀಚೆಗೆ ನಡೇದಿದ್ದು ನಾಲ್ಕು ದಿನಗಳ ಗಡುವು ನೀಡಿ ಕಾಮಗಾರಿಯ ಪ್ರಗತಿ ಬಗ್ಗೆ ವರದಿ ನೀಡಲು ಖುದ್ದು ಸಚಿವರು ಸೂಚನೆ ನೀಡಿದ್ದರಾದರೂ ಕೂಡ ಈವರೆಗೂ ಯಾವ ವರದಿಯ ಮಾಹಿತಿಯೂ ಸಾರ್ವಜನಿಕರಿಗೆ ನೀಡಿಲ್ಲ, ಬದಲಾಗಿ ಏಕಾಏಕಿ ಟೋಲ್ ಪ್ರಾರಂಭಿಸಲಾಗಿದೆ. ಈ ವರ್ತನೆಯನ್ನು ಖಂಡಿಸಿ ನಾಳೆ(ಶನಿವಾರ) 10 ಗಂಟೆಗೆ ಹೆದ್ದಾರಿ ಜಾಗೃತಿ ಸಮಿತಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

5 ದಿನಗಳ ಕಾಲ ಸ್ಥಳದಲ್ಲಿ 144 ಸೆಕ್ಷನ್…
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ಪ್ರದೇಶದಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದ ಹಿನ್ನೆಲೆ ಇದಕ್ಕೆ ವಿರೋಧಿಸಿ ಪ್ರತಿಭಟನೆ, ಮುಷ್ಕರ, ಬಂದ್ ಮೊದಲಾದವುಗಳನ್ನು ನಡೆಸಿ ಸಾರ್ವಜನಿಕ ನೆಮ್ಮದಿಗೆ ಭಂಗವಾಗುವ ಹಿನ್ನೆಲೆಯಲ್ಲಿ ಗುರುವಾರ (10-02-2017) ಸಂಜೆ 6 ಗಂಟೆಯಿಂದ 15-02-2017 ಮಧ್ಯರಾತ್ರಿಯೊರೆಗೂ ಜಾರಿಗೊಳ್ಳುವಂತೆ ಪ್ರತಿಬಂಧಕಾಜ್ನೆ(144 ಸೆಕ್ಷನ್) ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸಾಸ್ತಾನ ಗುಂಡ್ಮಿ ಟೋಲ್ ಗೇಟ್ ವ್ಯಾಪ್ತಿಯ 2 ಕಿ.ಮೀ. ಅಂತರದಲ್ಲಿ ಈ ನಿಷೇದಾಜ್ನೆ ಜಾರಿಯಲ್ಲಿರಲಿದೆ.

ಬಾರೀ ಬಂದೋಬಸ್ತ್….
ಟೋಲ್ ಸಂಗ್ರಹಕ್ಕೆ ಬಾರೀ ವಿರೋಧವಿರುವ ಕಾರಣ ಸಾಸ್ತಾನದ ಟೋಲ್ ಗೇಟ್ ಬಳಿ ಬಾರೀ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕುಂದಾಪುರ ಡಿವೈಎಸ್ಪಿ, ವಿವಿಧ ಠಾಣೆಗಳ ಸಿ.ಪಿ.ಐ., ಹಾಗೂ ಉಪನಿರೀಕ್ಷಕರು ನೂರಾರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಕೆ.ಎಸ್.ಆರ್.ಪಿ. ವಾಹನ ಹಾಗೂ ಮೀಸಲು ಪಡೆ ವಾಹನದಲ್ಲಿ ಸ್ಥಳದಲ್ಲಿ ಬೀಡುಬಿಟ್ಟಿದೆ.

ಟ್ರಾಫಿಕ್ ಜಾಮ್:
ಆಟೋ ರಿಕ್ಷಾ ಸೇರಿದಂತೆ ಬೈ ಹಾಗೂ ಇತರೆ ದ್ವಿಚಕ್ರ ವಾಹನಗಳಿಗೆ ಟೋಲ್ ವಿನಾಯಿತಿ ನೀಡಿದ್ದು, ಖಾಸಗಿ ಬಸ್ಸು ಸೇರಿದಂತೆ ಉಳಿದೆಲ್ಲ ವಾಹನಗಳಿಗೆ ಟೋಲ್ ಪಾವತಿ ಇಂದಿನಿಂದ ಆರಂಭಗೊಂಡಿದ್ದು ಜನರ ಅಸಮಾಧನಕ್ಕೆ ಕಾರಣವಾಗಿದೆ. ಏಕಾಏಕಿ ಟೋಲ್ ಆರಂಭಗೊಂಡ ಹಿನ್ನೆಲೆ ಹಾಗೂ ಕೆಲವಾರು ತಾಂತ್ರಿಕ ಅಡಚಣೆಗಳಿಂದ ಟೋಲ್ ಸಂಗ್ರಹದ ವೇಳೆ ಕೆಲವು ಲೋಪದೋಷಗಳು ಉಂಟಾಗಿದ್ದು ವಾಹನ ಸವಾರರು ನಿಮಿಷಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

Comments are closed.