ಕರಾವಳಿ

ಪ್ರಸಾದ್‌ ಅತ್ತಾವರ್ ಹತ್ಯೆಗೆ ಸ್ಕಚ್..? : ಬಂಧಿತ ಶಾರ್ಪ್‌ ಶೂಟರ್‌‌ಗಳಿಂದ ರಹಸ್ಯ ಬಯಲು

Pinterest LinkedIn Tumblr

ಮಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಶ್ರೀರಾಮ ಸೇನೆಯ ಮಾಜಿ ಮುಖಂಡ ಮಂಗಳೂರಿನ ಪ್ರಸಾದ್‌ ಅತ್ತಾವರ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಇತ್ತೀಚಿಗೆ ಬೆಳಗಾವಿಯಲ್ಲಿ ಬಂಧಿತರಾದ ಶಾರ್ಪ್‌ ಶೂಟರ್‌ಗಳು ವಿಚಾರಣೆಯ ವೇಳೆ ಈ ಸ್ಫೋಟಕ ವಿಷಯ ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂಗತ ಪಾತಕಿ ರವಿ ಪೂಜಾರಿ ನಂಟು ಆರೋಪದ ವಿಚಾರಣೆಗಾಗಿ ಫೆ.15ರಂದು ಪ್ರಸಾದ್‌ ಅತ್ತಾವರ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬರುವ ವೇಳೆ ಕೊಲೆ ನಡೆಸಲು ಈ ತಂಡ ಸಂಚು ರೂಪಿಸಿತ್ತು ಎಂದು ತಿಳಿದುಬಂದಿದೆ.

ರವಿ ಪೂಜಾರಿ ಸಹಚರನೆಂದು ಹೇಳಲಾಗಿರುವ ದಿನೇಶ್‌ ಶೆಟ್ಟಿ ಸೂಚನೆಯ ಮೇರೆಗೆ ಈ ಕೊಲೆ ಸಂಚು ನಡೆಸಲಾಗಿತ್ತು ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ಆರು ಮಂದಿ ಶಾರ್ಪ್‌ ಶೂಟರ್‌ಗಳನ್ನು ಬಂಧಿಸಲಾಗಿತ್ತು.ಈ ಆರೋಪಿಗಳು ವಿಚಾರಣೆ ವೇಳೆ ಸುಳ್ಯದ ಐವರ್ನಾಡಿನಲ್ಲಿ ಅಡಿಕೆ ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿರುವುದನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಸಹಚರ ಎಂದು ಹೇಳಲಾಗಿರುವ ದಿನೇಶ್‌ ಶೆಟ್ಟಿ 2010ರಲ್ಲಿ ನಡೆದ ವಕೀಲ ನೌಶದ್‌ ಖಾಶಿಂ ಜೀ ಹತ್ಯೆಯ ಪ್ರಮುಖ ಆರೋಪಿ. ಸದ್ಯ ಈತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.

Comments are closed.