ಕರಾವಳಿ

ಫೆ .11 ಮತ್ತು 12 : ಮಂಗಳೂರಿನಲ್ಲಿ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ : ಚಕ್ರವರ್ತಿ ಸೂಲಿಬೆಲೆ

Pinterest LinkedIn Tumblr

ಮಂಗಳೂರು, ಫೆಬ್ರವರಿ. 10: ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನವು ಫೆ .11 ಮತ್ತು 12ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯುವ ಬ್ರಿಗೇಡ್ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯಲಿದ್ದು, ಫೆ.11ರಂದು ಪೂರ್ವಾಹ್ನ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ವಿವೇಕ-ನಿವೇದಿತಾರ ಸಾಹಿತ್ಯದ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ 12ರಿಂದ 2 ಗಂಟೆಯವರೆಗೆ ವಿವೇಕ-ನಿವೇದನಾ ಗೋಷ್ಠಿ, 3ರಿಂದ 4ರವರೆಗೆ ಪ್ರೇರಣೆಯ ಮಾತುಗಳಿಗೆ ಪ್ರತಿನಿಧಿಗಳ ದನಿ ಗೋಷ್ಠಿ, 4:30ರಿಂದ 5:30ರವರೆಗೆ ರಾಷ್ಟ್ರಭಕ್ತಿ ಕಾರ್ಯಕ್ರಮ, 6:30ರಿಂದ ವಿವೇಕಾನಂದರ ಕುರಿತ ನರೇಂದ್ರ ಭಾರತ ಕಾರ್ಯಕ್ರಮ ನಡೆಯಲಿದೆ ಎಂದವರು ವಿವರಿಸಿದರು.

ಫೆ.12ರಂದು ಪೂರ್ವಾಹ್ನ 9:30ರಿಂದ ಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಸೀ ಸಮಾವೇಶ ‘ಶಕ್ತಿ ಸ್ವರೂಪಿಣಿ’, ಮಕ್ಕಳ ಸಮಾವೇಶ ‘ಗೆಲುವೇ ಗುರಿ’, ಮೊಗವೀರರ ಸಮಾವೇಶ ‘ಅವಕಾಶಗಳ ಸಾಗರ’ ಕಾರ್ಯಕ್ರಮಗಳು ನಡೆಯಲಿದೆ ಎಂದು ಸೂಲಿಬೆಲೆ ತಿಳಿಸಿದರು.

ಯುವಬ್ರಿಗೇಡ್ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ, ಮಂಗಳೂರು ವಿಭಾಗ ಸಂಚಾಲಕ ಮಂಜಯ್ಯ ನೇರಂಕಿ, ನಿವೇದಿತಾ ಪ್ರತಿಷ್ಠಾನದ ಸ್ವಾತಿ, ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಗಿರಿಧರ ಶೆಟ್ಟಿ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.