ಮಂಗಳೂರು, ಫೆಬ್ರವರಿ.8: ದಡಾರ ( Measles) – ರುಬೆಲ್ಲಾ (M R) ರೋಗ ನಿಯಂತ್ರಕ ಲಸಿಕೆಯಿಂದ ಮಾನವನ ಆರೋಗ್ಯಕ್ಕೆ ಹಾನಿಕಾರ ಅಥವಾ ಸಂತಾನ ಅಭಿವೃದ್ಧಿಗೆ ಅಡ್ಡ ಪರಿಣಾಮ ಬೀರುವುದಿಲ್ಲ. ಈ ಚುಚ್ಚುಮದ್ದನ್ನು ವಯಸ್ಸಿನ ಅಂತರವಿಲ್ಲದೆ ನೀಡಲಾಗುತ್ತದೆ. ಅದಲ್ಲದೆ MR ಲಸಿಕೆಯನ್ನು ಹಜ್ಜ್ ಯಾತ್ರಾರ್ಥಿಗಳಿಗೆ ನೀಡಲಾಗುತ್ತದೆ. ಪೋಷಕರು ಯಾವುದೇ ವದಂತಿಗಳಿಗೆ ಕಿವಿಕೊಡದೆ 9ತಿಂಗಳಿನಿಂದ 15ವರ್ಷದೊಳಗಿನ ಎಲ್ಲಾ ಮಕ್ಕಳು ನಿರಾತಂಕವಾಗಿ ಇದರ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದು ಎಸ್ ಡಿಪಿಐ ಪ್ರಕಟನೆ ತಿಳಿಸಿದೆ.
ಷಡ್ಯಂತ್ರಗಳಿಗೆ ಮುಸ್ಲಿಂ ಸಮುದಾಯ ಬಲಿಯಾಗಬೇಡಿ :ಎಸ್ ಡಿಪಿಐ ಎಚ್ಚರಿಕೆ
ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಶಾಲೆಗಳಲ್ಲಿ ಅದರಲ್ಲೂ ಮುಸಲ್ಮಾನರಲ್ಲಿ ಲಸಿಕೆಯ ಬಗ್ಗೆ ಗೊಂದಲಗಳು ಇನ್ನೂ ನಿವಾರಣೆಯಾಗಿಲ್ಲ ಆದುದರಿಂದ ಧಾರ್ಮಿಕ ಪಂಡಿತರು, ಮುಸ್ಲಿಂ ಶಿಕ್ಷಣ ಸಂಸ್ಥೆಗಳು, ಸಂಘಸಂಸ್ಥೆಗಳು ಹಾಗೂ ಊರಿನ ಹಿರಿಯರು ಈ ಲಸಿಕೆಯನ್ನು ಕೊಡಿಸುವುದರಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮಗಲಿಲ್ಲ ಇದು ಮುಸ್ಲಿಂ ವಿರೋಧಿಗಳ ಷಡ್ಯಂತ್ರ ಎಂಬ ಜಾಗೃತಿಯನ್ನು ಎಲ್ಲಾ ಮೊಹಲ್ಲಾಗಳಲ್ಲಿ ಮಾಡಬೇಕಾಗಿದೆ.
ಆದುದರಿಂದ ಎಲ್ಲಾ ಪ್ರಜ್ಞಾವಂತ ನಾಗರಿಕರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ದಡರಾ ಮತ್ತು ರೊಬೆಲ್ಲೊ ರೋಗ ನಿಯಂತ್ರಕ ಲಸಿಕೆಯನ್ನು ಮಕ್ಕಳಿಗೆ ಕೊಡಿಸಿ ಆರೋಗ್ಯವನ್ನು ರಕ್ಷಿಸಬೇಕು ಎಂದು ಎಸ್ ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ ತಿಳಿಸಿದ್ದಾರೆ.
Comments are closed.