ಕರಾವಳಿ

ಬಡ್ಡಿ ವ್ಯವಹಾರದ ಹೆಸರಿನಲ್ಲಿ ವಂಚನೆ ಆರೋಪ : 80 ಖಾಲಿ ಚೆಕ್, 5 ಸ್ಟಾಂಪ್ ಪೇಪರ್ ಸಹಿತಾ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಫೆಬ್ರವರಿ. 6: ನಗರದಲ್ಲಿ ಬಡ್ಡಿ ವ್ಯವಹಾರದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಿರುವ ಬರ್ಕೆ ಠಾಣಾ ಪೊಲೀಸರು ಆರೋಪಿಯಿಂದ ವಿವಿಧ ಬ್ಯಾಂಕುಗಳ ಸುಮಾರು 80 ಖಾಲಿ ಚೆಕ್ ಗಳು, 5 ಸ್ಟಾಂಪ್ ಪೇಪರ್ ಮತ್ತು 7,500 ರೂ. ನಗದು ವಶ ಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬೊಕ್ಕಪಟ್ಣದ ನಿವಾಸಿ ಶಾನ್ ಡಿ’ಸೋಜಾ (36) ಎಂದು ಹೆಸರಿಸಲಾಗಿದೆ.

ಶಾನ್ ಡಿ’ಸೋಜಾ ಕಡಿಮೆ ಬಡ್ಡಿಗೆ ಹಣ ನೀಡುತ್ತೇನೆ ಎಂದು ಜನರನ್ನು ನಂಬಿಸಿ ಅವರಿಂದ ಖಾಲಿ ಚೆಕ್ ಗಳನ್ನು ಪಡೆದು ಅದರಲ್ಲಿ ಅಧಿಕ ಮೊತ್ತವನ್ನು ನಮೂದಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಹಣ ನೀಡದಿದ್ದರೆ ಚೆಕ್ ಬೌನ್ಸ್ ಕೇಸು ಹಾಕಿ ಜನರನ್ನು ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇಂತಹ ಕಿರುಕುಳ ಪ್ರಕರಣಗಳ ಬಗ್ಗೆ ಕೆಲವೆಡೆಗಳಿಂದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ರವಿವಾರ ಬೊಕ್ಕಪಟ್ಣದಲ್ಲಿರುವ ಆತನ ಮನೆಗೆ ದಾಳಿ ನಡೆಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.