ಕರಾವಳಿ

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮೋದಿ ವಿಡಿಯೋ ಕಾನ್ಫರೆನ್ಸ್; ಪೇಜಾವರ ಶ್ರೀಗಳನ್ನು ಹೊಗಳಿದ ಮೋದಿ

Pinterest LinkedIn Tumblr

ಉಡುಪಿ: ಉಡುಪಿಯ ಭಕ್ತರಿಗೆ ರೋಮಾಂಚನದ ಕ್ಷಣವೊಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸೃಷ್ಟಿಯಾಯಿತು. ಕಿಕ್ಕಿರಿದ ಜನ ಸಮೂಹ ದೇಶದ ಪ್ರಸಿದ್ದ ನಾಯಕ ಬಾಷಣ ಕೇಳಲು ಕಾತುರದಿಂದ ಕಾತಿದ್ದರು. ಆ ಸಮಯ ಬಂದಾಗ ಸಿಳ್ಳಿ, ಚಪ್ಪಾಳೆಯ ಮೂಲಕ ಜನ ನಾಯಕನನ್ನು ಅಭಿಮಾನದಿಂದ ಸ್ವಾಗತಿಸಿದಲ್ಲದೇ ಅವರ ಭಾಷಣವನ್ನು ಕೌತುಕದಿಂದ ಕೇಳಿದರು. ಯಸ್ … ಮೋದಿ ಭಾಷಣಕ್ಕೆ ಉಡುಪಿಯಲ್ಲಿ ಭಕ್ತ ಸಮೂಹ ಸಂತುಷ್ಟರಾದರು.

ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ಮದ್ವ ಸಪ್ತಶತಮಾನೋತ್ಸವದ ಸಮಾರಂಭ ನಡೆಯುತ್ತಿದೆ. ಈಗಾಗಲೇ ಅನೇಕ ನಾಯಕರು ರಾಜಾಂಗಣ ವೇದಿಕೆಯನ್ನು ಹತ್ತಿದ್ದಾರೆ. ಆದ್ರೆ ಭಾನುವಾರ ಸಂಜೆ ಮಾತ್ರ ಈ ವೇದಿಕೆ ಅನೇಕ ಭಕ್ತರ ಕೌತುಕಕ್ಕೆ ಕಾರಣವಾಗಿತ್ತು. ಅದಕ್ಕೆ ಕಾರಣ ಜನಮೆಚ್ಚಿನ ನಾಯಕ, ದೇಶದ ಪ್ರದಾನಿ ಮಾತಿಗಾಗಿ ಜನರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭಕ್ಕೆ ನೇರವಾಗಿ ಬರಲು ಅಸಾದ್ಯವಾದ ಕಾರಣ ಪ್ರದಾನಿ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಷಣವನ್ನು ಮಾಡಿದರು. ಸೇರಿದ್ದ ಅಸಖ್ಯ ಜನರು ಮೋದಿ ಭಾಷಣವನ್ನು ನೋಡಿ ಆನಂದಿಸಿದರು. ಅಲ್ಲದೇ ನೆಚ್ಚಿನ ನಾಯಕನ ಮಾತಿಗೆ ಚಪ್ಪಾಳೆ, ಸಿಳ್ಳೆ ಹಾಕಿದರು. ಪ್ರದಾನಿ ಮೋದಿ ಭಾಷಣದ ಉದ್ದಕ್ಕೂ ಪೇಜಾವರ ಶ್ರೀಗಳ ಕಾರ್ಯ ಮತ್ತು ಸಂತರು ಇಡೀ ದೇಶಕ್ಕೆ ನೀಡಿರುವ ಸೇವೆಯನ್ನು ಸ್ಮರಿಸಿದರು. ಸಂಸ್ಕೃತಿ, ಆಚಾರ ವಿಚಾರಗಳಿಗೆ ಸಂತರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಮದ್ವಾಚಾರ್ಯರು ಭಕ್ತಿ ಆಂದೋಲನದ ಮಹಾನ್ ದಾರ್ಶನಿಕರು. ನಾನು ಮದ್ವ ಸಪ್ತಶತಮಾನೋತ್ಸವದಲ್ಲಿ ಭಾಗವಹಿಸಿದ್ದು ಸೌಭಾಗ್ಯ. ಸ್ವಾರ್ಥದಿಂದ ಸಮಾಜದಲ್ಲಿ ಬೃಷ್ಟಚಾರ ಹೆಚ್ಚಾಗುತ್ತದೆ.ನಿಸ್ವಾರ್ಥ ಸೇವೆ ಮಾಡಿದರೆ ಸಮಾಜದಲ್ಲಿ ಬೃಷ್ಟಾಚಾರ ಕಡಿಮೆ ಆಗುತ್ತದೆ ಎಂದು ಪ್ರದಾನಿ ಮೋದಿ ಸುಮಾರು ಅರ್ಧಗಂಟೆಯ ಬಾಷಣ ಮಾಡಿದರು.

ಅಂದ ಹಾಗೆ ಪೇಜಾವರ ಶ್ರೀಗಳ ಎರಡನೇ ಪರ್ಯಾಯಕ್ಕೆ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ ಬಂದಿದ್ದ ನರೇಂದ್ರ ಮೋದಿ ತನ್ನ ಐದನೇ ಐತಿಹಾಸಿಕ ಪರ್ಯಾಯಕ್ಕೆ ಬರಬೇಕು ಎಂದು ಮೋದಿಗೆ ಪೇಜಾವರ ಶ್ರೀಗಳು ಆಹ್ವಾನ ನೀಡಿದರು. ಬರೇ ವಿಡೀಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು ಸಂತಸ ತಂದಿಲ್ಲ. ಸ್ವತ: ಇಲ್ಲಿಗೇ ಬರಬೇಕು ಎಂದರು. ಅದಕ್ಕೆ ಪ್ರತಿಕ್ರೀಯಿಸಿದ ಮೋದಿ ಉಡುಪಿಗೆ ಬರುವ ಭರವಸೆ ನೀಡಿದರು. ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿಗೆ ಉಡುಪಿಯ ಶ್ರೀ ಕೃಷ್ಣ ಇನ್ನಷ್ಟು ಬಲ ನೀಡಲಿ ಎಂದು ಪೇಜಾವರ ಶ್ರೀಗಳು ಹಾರೈಸಿದರು.

ಒಟ್ಟಿನಲ್ಲಿ ಭಾನುವಾರ ಸಂಜೆ ಉಡುಪಿಯ ಭಕ್ತರಿಗೆ ವಿಶೇಷವಾಗಿತ್ತು. ಮದ್ವ ಸಪ್ತಶತಮಾನೋತ್ಸವದಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ ನೆಚ್ಚಿನ ನಾಯಕನ ಭಾಷಣವನ್ನು ಕೇಳಿ ಡಬಲ್ ಸಂಭ್ರಮಪಟ್ಟರು. ಉಡುಪಿ ಮಾತ್ರವಲ್ಲದೇ ಅನೇಕ ಕಡೆಗಳಿಂದ ಮೋದಿ ಭಾಷಣ ಕೇಳಲು ಭಕ್ತರು ಆಗಮಿಸಿದ್ದರು.

Comments are closed.